ನೆಲ್ಯಾಡಿ: ಪಡುಬೆಟ್ಟು ಮಕ್ಕಳ ಯಕ್ಷಗಾನ ಮಂಡಳಿ ಉದ್ಘಾಟನೆ-ರಂಗಪ್ರವೇಶ

ನೆಲ್ಯಾಡಿ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ-ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ, ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಂದು ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರದಲ್ಲಿ ನಡೆಯಿತು.
ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿಯವರು ಮಕ್ಕಳ ಯಕ್ಷಗಾನ ಮಂಡಳಿಯನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಎಂಭತ್ತರ ದಶಕದಲ್ಲಿ ಈ ಮೇಳವನ್ನ ಸ್ಥಾಪಿಸಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನ ನೀಡಿ ಪ್ರಸಿದ್ಧಿಯನ್ನ ಪಡೆಯಲು ಕಾರಣೀಭೂತರಾದ ಇಲ್ಲಿನ ನಿವೃತ್ತ ಶಿಕ್ಷಕ ದಿ. ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಪ್ರತಿಷ್ಠಾನದ ಮೂಲಕ ನಾಲ್ಕು ದಶಕಗಳ ನಂತರ ಮತ್ತೆ ಅದೇ ಮಕ್ಕಳ ಮೇಳವನ್ನ ಇಂದು ಲೋಕಾರ್ಪಣೆ ಗೊಳಿಸುವ ಮಹಾನ್ ಕಾರ್ಯ ನನ್ನ ಪಾಲಿಗೊದಗಿದೆ. ಯಕ್ಷಗಾನವು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದ್ದು ಮಕ್ಕಳ ತಂಡದ ಮೂಲಕ ನಿರಂತರವಾಗಿ ಈ ಕೆಲಸ ನಡೆಯುವಂತಾಗಲಿ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ, ನಿವೃತ್ತ ಶಿಕ್ಷಕ,ಯಕ್ಷಗಾನ ಪ್ರಸಿದ್ಧ ಅರ್ಥಧಾರಿ ಗುಡ್ಡಪ್ಪ ಗೌಡ ಬಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿ ಮಕ್ಕಳ ಸಮರ್ಥ ತಂಡವೊಂದು ರೂಪುಗೊಳ್ಳಲು ಯಕ್ಷಗಾನದ ದಕ್ಷ ಗುರುಗಳು, ಶಾಲಾ ಅಧ್ಯಾಪಕ ವೃಂದ, ಮಕ್ಕಳ ಪೋಷಕರೆಲ್ಲರ ಸಹಕಾರ ಅವಿಸ್ಮರಣೀಯ ಎಂದರು. ಕೀರ್ತಿಶೇಷರು ಹಾಕಿಕೊಟ್ಟ ದಾರಿಯಲ್ಲಿ ಅವರ ಮನಸ್ಸಿನ ಉದ್ದೇಶಗಳನ್ನ ಪ್ರತಿಷ್ಠಾನದ ಮೂಲಕ ಕಾರ್ಯಗತಗೊಳಿಸಲು ನಮ್ಮ ಪ್ರಯತ್ನ ಸಾಗುತ್ತಿದೆ ಎಂದರು.
ಯಕ್ಷಗಾನ ಗುರುಗಳು ಯೋಗೀಶ್ ಶರ್ಮ ಅಳದಂಗಡಿ ಇವರನ್ನು ಪ್ರತಿಷ್ಠಾನ ಮತ್ತು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ರಿಕ್ಷಾ ಚಾಲಕ ಮಾಲಕ ಸಂಘ ಮಂಗಳೂರು ಇದರ ಅಧ್ಯಕ್ಷ ಬಿ.ವಿಷ್ಣುಮೂರ್ತಿ, ಶಾಂತಿನಗರ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕುಪ್ಳಾಜೆ ಸುಬ್ರಹ್ಮಣ್ಯ ಉಪಾಧ್ಯಾಯ,ನೆಲ್ಯಾಡಿಯ ಉದ್ಯಮಿ ಸುಬ್ರಹ್ಮಣ್ಯ ಆಚಾರ್, ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ಶಗ್ರಿತ್ತಾಯ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ,ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಸಂಚಾಲಕ ಗಂಗಾಧರ ಶೆಟ್ಟಿ ಹೊಸಮನೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್, ಮುಖ್ಯಶಿಕ್ಷಕಿ ಜೆಸ್ಸಿ ಕೆ.ಎ., ಹಾರ್ಪಳ ಶಾಸ್ತಾರೇಶ್ವರ ದೇವಳದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ಬಲ್ಯ ವಿನಾಯಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು, ಸುರೇಶ್ ಪಡಿಪ್ಪಂಡ, ರಮೇಶ್ ಗೌಡ ನಾಲ್ಗುತ್ತು, ಧನಂಜಯ ಹೊಸವಕ್ಲು,ಕಿರಣ್ ಗೌಡ ಪುತ್ತಿಲ, ಧನಂಜಯ ಕೊಡಂಗೆ, ಲೀಲಾವತಿ ಎಂ, ನ್ಯಾನ್ಸಿ ಲಿಝಿ, ಕವಿತ ಡಿ, ಮಮತ ಸಿ.ಹೆಚ್.,ಸಜಿನಾ ಕೆ, ಗೀತಾ ಬಿ.ಎಸ್., ಉಪಸ್ಥಿತರಿದ್ದರು.
ಶಿಕ್ಷಕಿ ಕಮಲಾಕ್ಷಿ ನಿರೂಪಿಸಿದರು. ಸುಬ್ರಹ್ಮಣ್ಯ ಶಗ್ರಿತ್ತಾಯ ಸ್ವಾಗತಿಸಿದರು. ಗಂಗಾಧರ ಶೆಟ್ಟಿ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರೀ ಬಾಲಸುಬ್ರಹ್ಮಣ್ಯ ಯಕ್ಷಗಾನ ಮಕ್ಕಳ ತಂಡದಿಂದ ಶಾಂಭವಿ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

Related Posts

Leave a Reply

Your email address will not be published.