ಎಲ್ಲೂರು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 5 ಮತ್ತು 6ನೇ ವಾರ್ಡ್ ನ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಎಚ್ಚರಿಕಾ ಬ್ಯಾನರನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸುವ ಮೂಲಕ ರಾಜಕಾರಣಿಗಳನ್ನು ಎಚ್ಚರಿಸಿದ್ದಾರೆ.
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ವಾರ್ಡ್ 5-6ರಲ್ಲಿ ರಸ್ತೆ ಹಾಗೂ ಪೂರಕ ದಾರಿದೀಪಗಳಿಲ್ಲದೆ ಗ್ರಾಮಸ್ಥರಾದ ನಾವು ಸಂಕಷ್ಟ ಅನುಭವಿಸುತ್ತಿದ್ದು, ಈ ಬಗ್ಗೆ ಸ್ಥಳೀಯ ಶಾಸಕರು ಸಹಿತ ಎಲ್ಲೂರು ಗ್ರಾ.ಪಂ.ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ನಿಟ್ಟಿನಲ್ಲಿ ಅವಳಿ ವಾರ್ಡ್ ಗಳ ಗ್ರಾಮಸ್ಥರಾದ ನಾವು ಮುಂದಿನ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದು, ಯಾವುದೇ ಕಾರಣಕ್ಕೆ ನಮ್ಮ ವಾರ್ಡಿನ ಸಮಸ್ಯೆ ಬಗೆಹರಿಸದ ಹೊರತು ಮತ ಯಾಚನೆಗೆ ನಮ್ಮ ವಾರ್ಡಿಗೆ ಬಾರದಂತೆ ಎಚ್ಚರಿಸಿದ್ದರು.

Related Posts

Leave a Reply

Your email address will not be published.