ಪಡುಬಿದ್ರಿ ವಿಷ್ಣು ಮೂರ್ತಿ ದೇವಳದ ಹೊಳೆದಂಡೆ ಕುಸಿತ : ಅವೈಜ್ಞಾನಿಕ ಕಾಮಗಾರಿ 33ಲಕ್ಷ ರೂಪಾಯಿ ಕಾಮಗಾರಿ ನೀರುಪಾಲು
ಸಣ್ಣ ನೀರಾವರಿ ಇಲಾಖೆಯ 33ಲಕ್ಷ ರೂಪಾಯಿ ವೆಚ್ಚದ ಹೊಳೆದಂಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾದ ಫಲವಾಗಿ ಕುಸಿದಿದ್ದು, ಜನರ ತೆರಿಗೆಯ ಹಣ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ನೀರು ಪಾಲಾಗಿದೆ.
ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯ ಪಾದೆಬೆಟ್ಟು ವಿಷ್ಣುಮೂರ್ತಿ ದೇವಳದ ಬಳಿಯಲ್ಲಿ ಹರಿಯುತ್ತಿರುವ ಕಾಮಿನಿ ಹೊಳೆಗೆ ದಂಡೆ ನಿರ್ಮಾಣ ನಡೆಸುವ ಜನ ಬೇಡಿಕೆ ಇಂದು ನಿನ್ನೆಯದಲ್ಲ.
ಕಳೆದ ಸುಮಾರು ಆರು ತಿಂಗಳ ಹಿಂದೆ ಈ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಗ್ರಾಮದಲ್ಲಿ ಗ್ರೀನ್ ಸಿಗ್ನಲ್ ದೊರೆತು, ಅದರ ಗುತ್ತಿಗೆಯನ್ನು ಕಾಪು ಸಮೀಪದ ಗುರ್ಮೆ ಕಿಶೋರ್ ಕುಮಾರ್ ವಹಿಸಿಕೊಂಡು ಕಾಮಗಾರಿ ಮುಗಿಸಿದ್ದು, ಇದೀಗ ಕೆಲವೇ ತಿಂಗಳಲ್ಲಿ ಕಾಮಗಾರಿಯ ಮೌಲ್ಯ ಅನಾವರಣಗೊಂಡಿದ್ದು, ಇದೀಗ ಕಟ್ಟಿದ್ದ ತಡೆಗೋಡೆ ಕುಸಿದು ನೀರಿಗೆ ತಲೆಬಾಗಿ ನಿಂತಿದೆ, ಯಾವುದೇ ಹೊತ್ತಲ್ಲಿ ಬಿರುಸಾಗಿ ಹರಿಯುವ ನೀರಿಗೆ ಈ ತಡೆಗೋಡೆ ಬಿದ್ದರೆ ಹರಿಯುವ ನೀರಿಗೆ ಅಣೆಕಟ್ಟು ಕಟ್ಟಿದಂತ್ತಾಗಿ ಈ ಭಾಗದ ಜನ ಬಾರೀ ಸಮಸ್ಯೆ ಅನುಭವಿಸ ಬೇಕಾದೀತು ಎನ್ನುವ ಈ ಭಾಗದ ಗ್ರಾ.ಪಂ. ಸದಸ್ಯ ಅಶೋಕ್ ಪೂಜಾರಿ, ಇದಕ್ಕೆ ಕಾರಣವಾದ ಗುತ್ತಿಗೆದಾರನ ವಿರುದ್ಧ ಕಠಿಣ ಕಾನೂನು ಜರುಗಿಸುವ ಮೂಲಕ ಪೆÇಲಾದ ಜನರ ತೆರಿಗೆ ಹಣವನ್ನು ಆತನಿಂದಲೇ ಮರು ಪಡೆಯುವಂತೆ ಆಗ್ರಹಿಸಿದ್ದಾರೆ.