ಪಡುಬಿದ್ರಿ: ಸೇವೆಯಿಂದ ನಿವೃತ್ತಿಗೊಂಡ ಪಡುಬಿದ್ರಿ ಎಎಸ್ಸೈ ದಿವಾಕರ್ ಸುವರ್ಣ ಅವರಿಗೆ ಬೀಳ್ಕೊಡುಗೆ
ಬಹಳಷ್ಟು ವರ್ಷಗಳಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಎಸ್ಸೈ ದಿವಾಕರ್ ಸುವರ್ಣ ವಯೋ ಸಹಜ ನಿವೃತ್ತಿ ನಮಗೆ ತುಂಬಲಾರದ ನಷ್ಟ ಎಂಬುದಾಗಿ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಬಹಳ ಬೇಸರ ವ್ಯಕ್ತ ಪಡಿಸಿದ್ದಾರೆ.
ಅವರು ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿನ ವಿಚಾರದಲ್ಲಿ ಯಾರೂ ಪರಿಪೂರ್ಣರಲ್ಲ ನಿಮ್ಮೊಂದಿಗೆ ಸೇವೆ ಸಲ್ಲಿಸುತ್ತಿರುವ ಕಿರಿಯರಿಗೆ ನಿಮ್ಮ ನಿವೃತ್ತಿಯ ಬಳಿಕವೂ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ. ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲೆಂದರು.
ನಿವೃತ್ತಿ ಪಡೆದ ದಿವಾಕರ್ ಸುವರ್ಣ ತಮ್ಮ ಮನದಾಳದ ಮಾತುಗಳು ತಮ್ಮ ಸಹೋದ್ಯೋಗಿಗಳ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿತು ಎಂದರು.
ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ದಿವಾಕರ್ ಸುವರ್ಣ ಅವರಿಗೆ ಪಡುಬಿದ್ರಿ ಠಾಣೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ದಿವಾಕರ್ ಸುವರ್ಣ ದಂಪತಿಗಳು ಸಹಿತ ಠಾಣಾ ಕ್ರೈಂ ಎಸ್ಸೈ ಸುದರ್ಶನ್ ದೊಡ್ಡಮನಿ ಇದ್ದರು, ಠಾಣಾ ಸಿಬ್ಬಂದಿ ಯೋಗೀಶ್ ಕಾರ್ಯಕ್ರಮ ನಿರ್ವಾಹಿಸಿದರು.