ನೆಲ್ಯಾಡಿ: ಕಾರು-ಬೈಕ್ ಡಿಕ್ಕಿ, ಬೈಕ್ ಸವಾರಿನಿಗೆ ಗಂಭೀರ ಗಾಯ
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸೈಂಟ್ ಜಾರ್ಜ್ ಚರ್ಚ್ ಬಳಿ ಕಾರು ಹಾಗೂ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತಲೆಗೆ, ಕೈಗೆ, ಕಾಲಿಗೆ ತೀವ್ರ ಸ್ವರೂಪದ ಗಾಂiÀÉ್ಗೂಂಡ ಘಟನೆ ನಡೆದಿದೆ. ಕಡಬ ತಾಲೂಕು ಬಲ್ಯ ಗ್ರಾಮದ ಕಂಚಿನಡ್ಕ ಮನೆಯ ಬೈಕ್ ಸವಾರ ಆನಂದ ಶೆಟ್ಟಿ ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸಮೇತ ರಸ್ತೆಗೆ ಸವಾರ ಎಸೆಯಲ್ಪಟ್ಟ ಪರಿಣಾಮ ಅವರ ತಲೆಗೆ, ಕೈಗೆ, ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ. ಅಪಘಾತದಲ್ಲಿ ಎರಡು ವಾಹನಗಳು ಜಖಂಗೊಂಡಿದೆ. ಘಟನ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.