ಪಡುಬಿದ್ರಿ : ಸ್ಕೂಟರ್‌ಗೆ ಪಿಕ್ ಅಪ್ ಢಿಕ್ಕಿ: ಸ್ಕೂಟರ್ ಸವಾರ ಗಂಭೀರ
ಪಡುಬಿದ್ರಿ ಸೇತುವೆ ಬಳಿ ಸ್ಕೂಟರ್ ವೊಂದಕ್ಕೆ ಪಿಕಪ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಾಯಗೊಂಡವರು ಪಲಿಮಾರು ಶಾಂಭವಿ ಕಂಪೌಂಡು ನಿವಾಸಿ ವಿಜಯ ಪೂಜಾರಿ(68) ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ಉಡುಪಿಯಿಂದ ಮರಳಿ ಮನೆಗೆ ಬರುತ್ತಿದ್ದ ಇವರು ಸೇತುವೆ ಬಳಿ ಬರುತ್ತಿರುವ ಸಂದರ್ಭ ಅದೇ ಕಡೆಯಿಂದ ಬಂದ ಪಿಕಪ್ ಡಿಕ್ಕಿಯಾಗಿದೆ. ಸವಾರ ಎಸೆಯಲ್ಪಟ್ಟರೆ ಸ್ಕೂಟರ್ ಪಿಕಪ್ ನಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ