ಪಡುಬಿದ್ರಿ: ಬೀಚ್‌ನಲ್ಲಿ ಸ್ವಚ್ಚತಾ ಪಕ್ವಾಡ ಅಭಿಯಾನ ಕಾರ್ಯಕ್ರಮ
ಪಡುಬಿದ್ರಿಯ ಮುಖ್ಯ ಬೀಚ್‌ನಲ್ಲಿ ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ವತಿಯಿಂದ ಸ್ವಚ್ಚತಾ ಪಕ್ವಾಡ್ ಅಭಿಯಾನ ಕಾರ್ಯಕ್ರಮ ನಡೆಯಿತು.
ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಿ.ಎಸ್.ಬಿ ಸಿಬ್ಬಂದಿಗಳು ಸಹಿತ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಕುಮಾರ ಪಿ.ಯು., ಸ್ವಚ್ಚತೆ ಎಂಬುದು ನಮ್ಮೆಲ್ಲಾರ ಜವಾಬ್ದಾರಿ, ಎಲ್ಲಾ ಪ್ರದೇಶವೂ ನಮ್ಮದೇ ಎಂಬ ಭಾವನೆ ಬಂದಾಗ ಬೇಕಾಬಿಟ್ಟಿ ಕಸ ಎಸೆಯುವುದನ್ನು ನಿಯಂತ್ರಣ ಮಾಡಲು ಸಾಧ್ಯ, ಅದರಲ್ಲೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದ್ದು ಯಾರೇ ನಿಷೇಧಿತ ಪ್ರದೇಶದಲ್ಲಿ ಕಸ ಎಸೆದಾಗ ಅದರ ಬಗ್ಗೆ ತಕ್ಷಣವೇ ತಿಳಿ ಹೇಳುವ ಕೆಲಸ ಮಾಡುವ ಮೂಲಕ ದೇಶ ಸೇವೆ ಮಾಡ ಬೇಕಾಗಿದೆ ಎಂದರು.
ಇದೇ ಸಂದರ್ಭ ಪಕ್ಕದ ಬ್ಲು ಪ್ಲ್ಯಾಗ್ ಬೀಚ್ ನಲ್ಲಿ ಕಸ ಹೆಕ್ಕಿ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲ, ಹೆಜಮಾಡಿ ಸಿ.ಎಸ್.ಬಿ. ಪೊಲೀಸ್ ನಿರೀಕ್ಷಕ ರತ್ನಾಕುಮಾರ್, ಪಡುಬಿದ್ರಿ ಠಾಣಾ ಅಪರಾಧ ವಿಭಾಗ ಉಪನಿರೀಕ್ಷಕ ಸುದರ್ಶನ್ ದೊಡ್ ಮನೆ, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ, ಅಜಯ್, ಅಶೋಕ ಸಾಲ್ಯಾನ್, ಹೇಮರಾಜ್, ವಿದ್ಯಾಶ್ರೀ, ಹರೀಶ್ ಶೆಟ್ಡಿ, ಸುಜಾತ ಆಚಾರ್ಯ, ವಿಜಯ ಶೆಟ್ಟಿ, ಸುಕೇಶ್ ಪಡುಬಿದ್ರಿ ಮುಂತಾದವರಿದ್ದರು.