ನವ ವಿವಾಹಿತೆ ಶವ ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆ

ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾದ ನವ ವಿವಾಹಿತೆಯ ಶವ ಮನೆಯ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ
ಮೃತ ನವವಿವಾಹಿತೆ ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ(24), ಈಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬುವರನ್ನು ಅಂತರ್ ಜಾತಿ ವಿವಾಹವಾಗಿದ್ದ ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸ ವಿದ್ದಳು, ಕಾಪುವಿನ ಮಹಾಬಲ ಮಾರ್ಲ್ ಕಟ್ಟಡದ ಪ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ಕಳೆದ ಮೂರನೇ ತಾರೀಖಿನಂದ್ದು ಅಂಗಡಿಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ಅಂಗಡಿ ಬಿಟ್ಟವಳು ನಾಪತ್ತೆಯಾಗಿದ್ದಳು.

ನಾಪತ್ತೆ ದೂರು ನೀಡಿಲ್ಲ: ಪತ್ನಿ ನಾಪತ್ತೆಯಾಗಿ ಆರು ದಿನಗಳು ಕಳೆದರೂ ಪತಿ ಸಂಜಯ್ ನಾಪತ್ತೆಯಾದ ಬಗ್ಗೆ ಠಾಣೆಗೆ ದೂರು ನೀಡಿಲ್ಲ ಏಕೆ ಎಂಬುದು ಪ್ರಶ್ನಾತೀತ.. ಇದೀಗ ಶನಿವಾರ ಆಕೆಯ ಶವ ಮನೆ ಪಕ್ಕದ ಹಾಡಿಯೊಂದರ ಪಾಳು ಬಾವಿಯೊಂದರಲ್ಲಿ ಪತ್ತೆಯಾಗುವ ಮೂಲಕ ಅನೇಕ ಪ್ರಶ್ನೆಗಳನ್ನು ಹುಟ್ಡು ಹಾಕಿದೆ. ಕಳೆದ ಒಂದುವರೆ ವರ್ಷಗಳ ಹಿಂದೆ ಸಂಜಯನೊಂದಿಗೆ ನಾಪತ್ತೆಯಾದ ಈಕೆಯನ್ನು ಕರೆತಂದು ಆತನೊಂದಿಗೆ ಮದುವೆ ಮಾಡಲಾಗಿದ್ದು, ಮದುವೆಯಾಗಿ ಇದೀಗ ಒಂದುವರೆ ವರ್ಷದಲ್ಲೇ ಆಕೆ ದಾರುಣಾವಾಗಿ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲಕ್ಕೆ ಸಾಗಿಸಲಾಗಿದ್ದು, ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ ಪ್ರಕರಣದ ತನಿಖೆ ನಡೆಸುತ್ತಿದ್ದು, ನೈಜ್ಯ ತನಿಖೆಯ ಬಳಿಕವಷ್ಟೇ ಪ್ರಕರಣದ ಸತ್ಯಸತ್ಯೆಗಳು ಹೊರ ಬೀಳಲಿದೆ.