ಪಡುಬಿದ್ರಿ: ಡಿ.23ರಂದು ಸುಜ್ಲಾನ್ ಮುಂಭಾಗ ಭೂ ಅವ್ಯವಹಾರದ ವಿರುದ್ಧ ಪ್ರತಿಭಟನೆ: ಮಾಜಿ ಸಚಿವ ವಿನಯಕುಮಾರ್ ಸೊರಕೆ

ಸುಜ್ಲಾನ್ ಕಂಪನಿ ನಿರ್ಮಾಣ ಪೂರ್ವದಲ್ಲಿ ಪಡುಬಿದ್ರಿ, ನಂದಿಕೂರು, ಪಲಿಮಾರು ಪರಿಸರದಲ್ಲಿ ಕೆಐಡಿಬಿ ವತಿಯಿಂದ 1200 ಎಕ್ರೆ ಪ್ರದೇಶವನ್ನು ಭೂಸ್ವಾದೀನ ಮಾಡಿದ ಕಂಪನಿ ಇದೀಗ ನಷ್ಟ ಅನುಭವಿಸಿದ ಕಾರಣ ಆ ಜಾಗವನ್ನು ಕೆಐಡಿಗೆ ಮರಳಿಸಬೇಕಾಗಿದ್ದರೂ ಮರಳಿಸದೆ ಖಾಸಗಿ ವ್ಯಕ್ತಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಎಸಗಲಾಗಿದ್ದು ಇದರ ವಿರುದ್ಧ ಸಾರ್ಜನಿಕವಾಗಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭೂ ಮಾಫಿಯಾ ವಿರುದ್ಧ ಧ್ವನಿ ಎತ್ತುವ ಮೂಲಕ ಬಡವರ ಧ್ವನಿಯಾಗ ಬೇಕಾಗಿದೆ, ಸುಜ್ಲಾನ್ ಕಂಪನಿಯ ನೂರಾರು ಎಕ್ರೆ ಭೂಮಿಯನ್ನು ಖಾಸಗಿ ಕಂಪನಿಗಳಾದ ಆಸ್ಪಿನ್ ಕಂಪನಿ, ತ್ರಿಶೂಲ್ ಕಂಪನಿ, ಜೈನ್ ಟುಬ್ ಆಂಡ್ ಪೈಪ್ ಪ್ರೈವೇಟ್ ಲಿಮಿಟೆಡ್ ಕಂಪನಿ, ಹೆಕ್ಸಾ ನ್ಯಾಚುರಲ್ ಕಂಪನಿ, ಎಂ 11 ಇಂಡಸ್ಟ್ರೀಸ್, ಪಾಮಾಯಿಲ್ ಕಂಪನಿ ಇತ್ಯಾದಿ ಕಂಪನಿಗಳಿಗೆ ದುಬಾರಿ ಬೆಲೆಯಲ್ಲಿ ಮಾರಾಟ ನಡೆಸಲಾಗಿದೆ. ಇಷ್ಟರಲ್ಲೇ ಸಾವಿರಾರು ಮಂದಿ ನಿರಾಶ್ರಿತರು ನಿವೇಶನಕ್ಕಾಗಿ ಗ್ರಾ.ಪಂ.ಗಳಿಗೆ ಮನವಿ ಸಲ್ಲಿಸಿದರೂ ಅವರಿಗೆ ನೀಡಲು ಸ್ಥಳ ಸ್ಥಳದ ಕೊರತೆ ಇದ್ದರೂ ಇಲ್ಕಿ ಮಾತ್ರ ಭೂ ಮಾಫಿಯಾ ತಾಂಡವ ವಾಡುತ್ತಿದೆ. ಇದಲ್ಲದೆ ಹತ್ತಾರು ಸಮಸ್ಯೆಗಳ ವಿರುದ್ಧ ಡಿ.23ರ ಶನಿವಾರ ಬೆಳಗ್ಗೆ ಹತ್ತರಿಂದ ಸುಜ್ಲಾನ್ ಕಂಪನಿ ಮುಂಭಾಗ ಬೃಹತ್ ಸಾರ್ವಜನಿಕ ಪ್ರತಿಭಟನೆ ಸಾಂಕೇತಿಕವಾಗಿ ನಡೆಸಲಿದ್ದು, ಬಳಿಕ ಮುಖ್ಯಮಂತ್ರಿಗಳು ಸಹಿತ ಸಚಿವರುಗಳಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು, ಮಾನ್ಯತೆ ಸಿಗದೇ ಇದ್ದಲ್ಲಿ  ಜಯ ದೊರಕುವ ತನಕ ನಿರಂತರ ಪ್ರತಿಭಟನೆ ಮುಂದುವರಿಸಲಾಗುವು ಎಂಬುದಾಗಿ ಸೊರಕೆ ಎಚ್ಚರಿಸಿದ್ದಾರೆ.

ಈ ಸಂದರ್ಭ ಸುದ್ಧಿಗೋಷ್ಠಿಯಲ್ಲಿ ನವೀನ್ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ರಮೀಜ್ ಹುಸೇನ್, ಶಾಂತಲಾ ಶೆಟ್ಟಿ, ಶರ್ಫುದ್ಧೀನ್ ಮುಂತಾದವರಿದ್ದರು.

Related Posts

Leave a Reply

Your email address will not be published.