ಪಡುಬಿದ್ರಿ : ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶ
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಈಚರ್ ಟಿಪ್ಪರೊಂದನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಜಾನೆ ಹೆದ್ದಾರಿಯಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಪಡುಬಿದ್ರಿ ಪೊಲೀಸರು ಟಿಪ್ಪರ್ ವೊಂದನ್ನು ನಿಲ್ಲಿಸಲು ಸೂಚನೆ ನೀಡಿದರೂ ಉಡುಪಿ ಕಡೆಗೆ ವೇಗವಾಗಿ ಪರಾರಿಯಾಗಲು ಯತ್ನಿಸಿದ ಕೆ.ಎ.20-ಬಿ 1146 ನೋಂದಾಯಿತ ಸಂಖ್ಯೆಯ ಟಿಪ್ಪರನ್ನು ಬೆನ್ನಟ್ಟಿದಾಗ ಅದರ ಚಾಲಕ ಟಿಪ್ಪರನ್ನು ಎರ್ಮಾಳು ಸೇತುವೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾನೆ, ಟಿಪ್ಪರನ್ನು ಪರಿಶೀಲನೆ ನೆಸಿದಾಗ ಅದರಲ್ಲಿ ಮೂರು ಯುನಿಟ್ ಮರಳು ಪತ್ತೆಯಾಗಿದ್ದು, ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳು ಇಲ್ಲದೆ ಅಕ್ರಮವಾಗಿ ಸಾಗಾಟ ನಡೆಸಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಗ್ಗಿಲ್ಲದೆ ರಾತ್ರಿ ಹಗಲೆನ್ನದೆ ಈ ಭಾಗದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಆಗಮ್ಮೆ ಈಗೊಮ್ಮೆ ಕೆಲವೊಂದು ಟಿಪ್ಪರ್ ಗಳು ಪೊಲೀಸ್ ಬಲೆಗೆ ಸಿಲುಕಿ ಹಾಕಿ ಕೊಳ್ಳುತ್ತಿದೆ.