ಪಡುಬಿದ್ರಿ ಇನ್ನರ್ ವೀಲ್‌ನ ಪದಾಧಿಕಾರಿಗಳ ಪದಗ್ರಹಣ
ಮಹಿಳೆಯರು ಯಾವಾಗಲೂ ಪುರುಷರಿಗಿಂತ ಕೆಳಗಿನವರು ಎಂಬ ಭಾವನೆಯನ್ನು ಹೋಗಲಾಡಿಸ ಬೇಕು ಮಾನವ ಹಕ್ಕು ಮತ್ತು ವ್ಯಯಕ್ತಿಕ ಹಕ್ಕುಗಳನ್ನು ಒದಗಿಸಬೇಕು ತಮ್ಮ ಜೀವನವನ್ನು ಸ್ವತಂತ್ರವಾಗಿ ಯಾವುದೇ ಭಯವಿಲ್ಲದೆ ಬದುಕುವಂತಾಗಲಿ ಎಂಬ ಉದ್ದೇಶವಿದೆ. ಜೀವನಕ್ಕೆ ಅವಶ್ಯಕವಾದ ಅವಕಾಶಗಳನ್ನು ಪಡೆದು ಕೊಳ್ಳಲು ಮಹಿಳೆಯರು ಯಾವುದೇ ಭಯವಿಲ್ಲದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಉಡುಪಿ ರೋಟರಿ ಅಧ್ಯಕ್ಷೆ ದೀಪಾ ಭಂಡಾರಿ ಹೇಳಿದರು.
ಅವರು ಪಡುಬಿದ್ರಿ ಸಹಕಾರಿ ಸಂಗಮದಲ್ಲಿ ನಡೆದ ಇನ್ನರ್ ವೀಲ್ಹ್ ಕ್ಲಬ್‌ನ ನೂತನ ಅಧ್ಯಕ್ಷೆ ನಮೃತ ಮಹೇಶ್ ಹಾಗೂ ಕಾರ್ಯದರ್ಶಿ ಮನೋರಮಾ ಮೇಘನಾಥ್ ರವರಿಗೆ ಪದಗ್ರಹಣ ನೇರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇನ್ನರ್ ವೀಲ್ಹ್ ವಲಯ ಸಿ.ಅರ್.ಜೆ ಶುಭಾದ ಭಟ್ ಮಾತನಾಡಿ ಪ್ರಪಂಚದಾದ್ಯಂತ ಪ್ರಾಯೋಗಿಕವಾಗಿ ಪ್ರತಿಯೊಂದು ಧರ್ಮ, ದೇಶ, ಸಂಸ್ಕೃತಿ ,ಜನಾಂಗ, ರಾಜಕೀಯ ,ಪ್ರೇರಣೆ, ಭಾಷೆ , ಬಣ್ಣ ಮತ್ತು ಜನಾಂಗೀಯ ಗುರುತನ್ನು ಇನ್ನರ್ ವೀಲ್ಹ್ ಪ್ರತಿನಿಧಿಸಲಾಗುತ್ತದೆ. ಇತರ ಸಂಸ್ಕೃತಿಗಳ ಬಗ್ಗೆ ಅರಿತುಕೊಂಡು ಎಲ್ಲರೊಂದಿಗೆ ಬದಕುಲು ಮತ್ತು ಕೆಲಸ ಮಾಡಲು ಕಲಿಯುವುದರ ಮೂಲಕ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ. ಇನ್ನರ್ ವೀಲ್ಹ್ ಎಂಬುದು ಸೇವಾ ಮನೋಭಾವದ ಮತ್ತು ಸಮರ್ಥ ವ್ಯಕ್ತಿಗಳ ಸಂಘಟನೆಯಾಗಿದೆ. ಇನ್ನರ್ ವೀಲ್ಹ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದು ನಾಯಕತ್ವದಲ್ಲಿ ಕಾಲೇಜು ಶಿಕ್ಷಣದಂತಿದೆ..ವಿವಿಧ ಹಂತಗಳ ಜನರನ್ನು ಪ್ರೇರೇಪಿಸುವುದು, ಪ್ರಬಾವಿಸುವುದು ಮತ್ತು ಮುನ್ನಡೆಸುವುದು ಹೇಗೆ ಎಂಬುದನ್ನು ಕಲಿಯ ಬಹುದು. ಎಂದು ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಂಜನಾ ಮತ್ತು ಸರಿತಾ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಡುಬಿದ್ರಿ ನಡ್ಸಾಲು ಗ್ರಾಮದ ಅಂಗನವಾಡಿಯ ವಿದ್ಯುತ್ ತಂತಿ ದುರಸ್ತಿಗೆ ಸಹಾಯಧನ ವಿತರಿಸಲಾಯಿತು. ವಾಹನ ಅಪಘಾತದಿಂದಾಗಿ ವ್ಯೆದಕೀಯ ಚಿಕಿತ್ಸೆ ಪಡೆಯುತ್ತಿರುವ ಬಡ ಕುಟುಂಬದ ಸುನಿಲ್ ಪಡುಬಿದ್ರಿ ಯವರಿಗೆ ವ್ಯೆದ್ಯಕೀಯ ವೆಚ್ಚಕ್ಕೆ ಸಹಾಯಧನ ನೀಡಲಾಯಿತು. ಇದೇ ಸಂದರ್ಭ ನೃತ್ಯ ನಿರ್ದೇಶಕ ಯತೀಶ್ ಶೆಟ್ಟಿ ಯವರನ್ನು ಸಾನ್ಮಿಸಲಾಯಿತು.
ರೋಟರಿ ನಿಯೋಜಿತ ಅಧ್ಯಕ್ಷ ಸಂತೋಷ್ ಪಡುಬಿದ್ರಿ , ನಿಕಟ ಪೂರ್ವ ಅಧ್ಯಕ್ಷೆ ವಿಮಲ ಸಾಲ್ಯಾನ್ ನಿಕಟ ಪೂರ್ವ ಕಾರ್ಯದರ್ಶಿ ಸುನಿತಾ ಭಕ್ಸವತ್ಸಲ ಉಪಸ್ಥಿತರಿದ್ದರು. ಮನೋರಮಾ ಮೇಘನಾಥ್ ಹಾಗೂ ಶುಭಾ ದಿನೇಶ್ ಕಾರ್ಯಕ್ರಮ ನಿರೂಪಿಸಿದರು.