ವಿದ್ಯುತ್ ಸ್ಪರ್ಶ : ನವಿಲ ರಕ್ಷಣೆಗೆ ಬಂತು ಆಂಬುಲೆನ್ಸ್
ಉಡುಪಿ : ವಿದ್ಯುತ್ ಸ್ಪರ್ಶಿಸಿ ರಾಷ್ಟ್ರಪಕ್ಷಿ ನವಿಲೊಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆ ಬಳಿ ನಡೆದಿದೆ. ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ನವಿಲನ್ನು ಕಂಡ ಸ್ಥಳೀಯರು ಉಡುಪಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ನವಿಲನ್ನು ಆ್ಯಂಬುಲೆನ್ಸ್ ನ ಮೂಲಕ ಉದ್ಯಾವರದ ಪಶುವೈದ್ಯ ಸಂದೀಪ್ ಶೆಟ್ಟಿ ಅವರ ಬಳಿ ಕೊಂಡೊಯ್ದು ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ, ನವಿಲನ್ನು ಪರೀಕ್ಷಿಸಿದ ಪಶುವೈದ್ಯ ಸಂದೀಪ್ ಅವರು, ನವಿಲು ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ. ಆ ಬಳಿಕ ನಿತ್ಯಾನಂದ ಒಳಕಾಡು ಅವರು ನವಿಲಿನ ಮೃತದೇಹವನ್ನು ಅರಣ್ಯ ಗಸ್ತು ಪಾಲಕ ದೇವರಾಜ್ ಪಾಣರ ಅವರಿಗೆ ಹಸ್ತಾಂತರಿಸಿದ್ದಾರೆ.