ವ್ಯವಸ್ಥಿತ ಜಾಲವನ್ನು ಸರ್ಕಾರ ಬೇಧಿಸಬೇಕು : ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ

ಬಂಟ್ವಾಳ: ಎರಡು ದಿನಗಳ ಹಿಂದೆ ಮಂಗಳೂರಿನ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಪೋಟ ಪ್ರಕರಣವನ್ಬು ಸರಕಾರ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿ ಭಯೋತ್ಪಾದಕ ಮೂಲವನ್ನು ಬೇಧಿಸಬೇಕು ಎಂದು ಆರ್ .ಎಸ್ .ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಒತ್ತಾಯಿಸಿದ್ದಾರೆ.ನಂದಾವರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದೊಗೆ ಮಾತನಾಡಿದ ಅವರು, ರಾಜ್ಯದ ದ.ಕ.ಜಿಲ್ಲೆ ಭಯೋತ್ಪಾದಕ ಸಂಘಟನೆಯ ತಾಣವಾಗುತ್ತಿರುವುದು ದುರ್ದೈವ ಸಂಗತಿಯಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ರಸ್ತೆ ಮೇಲಿನ ಬರಹ, ಶರತ್ ಮಡಿವಾಳ, ಪ್ರವೀಣ್ ನೆಟ್ಟಾರು, ಶಿವಮೊಗ್ಗ ದ ಹರ್ಷ ಕೊಲೆ ಕೃತ್ಯಗಳು ಜಿಲ್ಲೆಯಲ್ಲು ಭಯೋತ್ಪಾದಕ ಚಟುವಟಿಕೆ ಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವುದನ್ನು ಪುಷ್ಠಿಕರಿಸುತ್ತಿದೆ ಎಂದರು.ಮೈಸೂರಿನಲ್ಲಿ ಟಿಪ್ಪುವಿನ ಮೂರ್ತಿ ನಿರ್ಮಾಣವೇ ಹಾಸ್ಯಸ್ಪದ ಎಂದು ಪ್ರತಿಕ್ರಿಯಿಸಿದ ಡಾ.ಭಟ್ ಅವರು ಮುಸ್ಲಿಂ ಸಮುದಾಯದಲ್ಲಿ ಮೂರ್ತಿಪೂಜೆಗೆ ವಿರೋಧವಿರುವಾಗ ಟಿಪ್ಪು ಮೂರ್ತಿಗೆ ಸಿದ್ದರಾಮಯ್ಯರೇ ಪೂಜೆ ಮಾಡಬೇಕಾದೀತು ಎಂದು ಲೇವಡಿ ಮಾಡಿದರಲ್ಲದೆ ಇಲ್ಲಿ ಮೂರ್ತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.
