ಕಾಪು ಶ್ರೀ ಜನಾರ್ದನ ದೇಗುಲ ಮತ್ತು ಮಾರಿಗುಡಿಗೆ ಮುತಾಲಿಕ್ ಭೇಟಿ
ಪ್ರಖರ ಹಿಂದುತ್ವವಾದಿ, ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೋಮವಾರ ಸಾವಿರ ಸೀಮೆಯ ಒಡೆಯನ ಶ್ರೀ ಜನಾರ್ದನ ದೇಗುಲ ಹಾಗೂ ಕಾಪು ಶ್ರೀ ಹೊಸಮಾರಿ ಗುಡಿ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಶ್ರೀ ಜನಾರ್ದನ ದೇಗುಲದಲ್ಲಿ ವೇದಮೂರ್ತಿ ಜನಾರ್ಧನ ತಂತ್ರಿಯವರು ಶಾಲು ಹೊದಿಸಿ ಸನ್ಮಾನಿಸಿ ಪ್ರಸಾದ ವಿತರಿಸಿದರು.
ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀನಿವಾಸ್ ತಂತ್ರಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀದೇವಿಯ ಪ್ರಸಾದ ವಿಸ್ತರಿಸಿದರು. ಈ ಸಂದರ್ಭ ಪ್ರಮೋದ್ ಮುತಾಲಿಕ್ ಮಾತನಾಡಿ, ಪ್ರಥಮ ಬಾರಿಗೆ ಇಲ್ಲಿಯ ದೇಗುಲಕ್ಕೆ ಬರುತ್ತಿದ್ದೇನೆ. ಇಲ್ಲಿಯ ವಾಸ್ತು ಹಾಗೂ ಪರಿಕಲ್ಪನೆ ಮನಸ್ಸಿಗೆ ಸಂತಸ ನೀಡುತ್ತಿದೆ ಎಂದರು.
ಈ ಸಂದರ್ಭ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಮೋಹನ ಭಟ್, ಜಯರಾಮ್ ಅಂಚಿ ಕಲ್ಲು, ಶರತ್, ಲಕ್ಷ್ಮೀಶ ಕಾಪು, ಸುದರ್ಶನ್ ಕಪ್ಪೆಟ್ಟು, ದಿವಾಕರ್, ರಾಧಾಕೃಷ್ಣ, ಸುಜಿತ್ ನಿಟ್ಟೂರು, ರಮೇಶ್ ಹೆಗ್ಡೆ ಕಲ್ಯ, ಗೋವರ್ಧನ್ ಶೇರಿಗಾರ್, ಶ್ರೀಧರ್ ತಂತ್ರಿ ಉಪಸ್ಥಿತರಿದ್ದರು.