ಉಳ್ಳಾಲ ಎಸ್‍ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಕೆ

ಮಂಗಳೂರು ವಿಧಾನಸಭಾ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಅವರು ನಾಮಪತ್ರ ಸಲ್ಲಿಸಿದರು. ಅವರು ತೊಕ್ಕೊಟ್ಟುವಿನ ಮೈದಾನದಲ್ಲಿ ಜರಗಿದ ಎಸ್‍ಡಿಪಿಐ ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಅವರ ಜತೆಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುಎಇ ಯ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆ.

ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ ಭಯಮುಕ್ತ, ಹಸಿವುಮುಕ್ತ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಧಕ್ಕಿಸಿಕೊಡುವ ಉದ್ದೇಶ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಇರುವ ಏಕೈಕ ಪಕ್ಷ ಎಸ್ ಡಿಪಿಐ. ಪಕ್ಷದ ಅಧಿಕಾರ ನಡೆಸುವ ಎರಡು ಗ್ರಾ.ಪಂ ಗಳು ಕೂಡಾ ಮಂಗಳೂರು ಮಂಡಲದಲ್ಲೇ ಇದೆ. ಉಳ್ಳಾಲದ ಶಾಸಕ ಯು.ಟಿ ಖಾದರ್ ಅವರು ತಂದೆಯ ಅಕಾಲಿಕ ನಿಧನ ಸಂದರ್ಭ , ಕಾಂಗ್ರೆಸ್ ಒಳಗಿನ ನಾಯಕರೇ ಖಾದರ್ ಚುನಾವಣೆಯಲ್ಲಿ ಅಡ್ಡಗಾಲು ಹಾಕಿದ್ದಾಗ ಅಂದು ಇದ್ದ ಪಿಎಫ್ ಐ ಮುಖಂಡರ ಕಾಡಿಬೇಡಿ ಬೆಂಬಲ ಯಾಚಿಸಿರುವುದು ಎಲ್ಲರಿಗೂ ನೆನಪಿದೆ. ದೇಶಕ್ಕೆ ಮಾರಕವಾಗಿರುವ ಸಂಘಪರಿವಾರದ ವಿರುದ್ಧ ಗಟ್ಟಿ ದನಿಯಾಗಿ ಮಾತನಾಡಿದ್ದು ಎಸ್ ಡಿಪಿಐ. ಸಂವಿಧಾನ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದವರು ಬಳಿಕ ಸಂಘಪರಿವಾರದ ಮೇಲಿನ ಪ್ರೀತಿಯಿಂದ ಕ್ಷಮೆಯಾಚಿಸಿದ್ದರು. ಆದರೆ ಅದೇ ಸಂಘಪರಿವಾರದವರು ಹಿಂದೂ ಸಮಾಜೋತ್ಸವ ಸಂದರ್ಭ ಖಾದರ್ ಕುತ್ತಿಗೆ ಕಡಿಯಬೇಕು ಅಂದಾಗ ಅವರಿಗೆ ಖಾದರ್ ಕ್ಷಮೆಯನ್ನು ನೀಡಿರುವುದು ಬಿಜೆಪಿ ಪರ ಓಲೈಕೆಯಲ್ಲಿರುವುದು ಸ್ಪಷ್ಟವಾಗಿದೆ.

ರಾಷ್ಟ್ರೀಯ ಸಮಿತಿ ಸದಸ್ಯ ಎನ್.ಯು. ಅಬ್ದುಲ್ ಸಲಾಂ, ರಾಜ್ಯ ಸಮಿತಿ ಸದಸ್ಯರುಗಳಾದ ಮಜೀದ್ ಖಾನ್, ಶಹೀದಾ ತಸ್ನೀಮ್, ಜಿಲ್ಲಾ ಪ್ರ.ಕಾ ಅನ್ವರ್ ಸಆದತ್ ಬಜತ್ತೂರು. ರಾಜ್ಯ ಚುನಾವಣಾ ಸಹ ಉಸ್ತುವಾರಿ ನವಾಝ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಜಿಲ್ಲಾ ಉಪಾಧ್ಯಕ್ಷ ರವಿ ಕುಟಿನ್ಹಾ, ಅಶ್ರಫ್ ಮಂಚಿ, ಉಬೈದ್ ಅಮ್ಮೆಂಬಳ, ಸಲಾಮ್ ವಿದ್ಯಾನಗರ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಖಮರುನ್ನೀಸಾ ಪಾವೂರು, ಅನ್ಸಾರ್ ಇನೋಳಿ, ಎಸ್.ಎನ್ ಇಕ್ಬಾಲ್ ಸಜಿಪ, ಸಂತೋಷ್ ಮೊಂತೇರೊ, ಸುನಿತಾ ಸಲ್ದಾನ್ಹ, ನವೀನ್ ಸಲ್ದಾನ್ಹ, ರೆಬೆಕಾ ಸಲ್ದಾನ್ಹ, ಮತ್ತು ಅಬ್ದುಲ್ ರಹಿಮಾನ್ ಮುನ್ನೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.