ಮಂಗಳೂರು: ಪ್ರತಿಮಾ ಭಟ್ ಬಿ ಅವರಿಗೆ ಪಿಎಚ್. ಡಿ ಪದವಿ ಪ್ರದಾನ

ಕೃಷ್ಣಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವ್ಯವಹಾರ ಅಧ್ಯಯನ ಉಪನ್ಯಾಸಕಿ ಪ್ರತಿಮಾ ಭಟ್ ಬಿ ಅವರು ಮಂಡಿಸಿದ ” ಎಜುಕೇಶನ್ ಅಂಡ್ ಎಂಪ್ಲೊಎಬಿಲಿಟಿ ಡಿವೈಡ್ ಇನ್ ಬಿಸಿನೆಸ್ ಎಜುಕೇಶನ್- ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್. ಡಿ ಪದವಿ ನೀಡಿ ಗೌರವಿಸಿತು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುಭಾಷಿಣಿ ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧ ಪಡಿಸಲಾಗಿತ್ತು. ಸಂಶೋಧಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಹಲವು ಲೇಖನಗಳನ್ನು ಪ್ರಕಟಿಸಿದ್ದರು. ಇವರು ದಿ.ಬಂಟ್ವಾಳ ನಾಗೇಶ್ ಭಟ್, ಲಲಿತಾ ಭಟ್ ರವರ ಪುತ್ರಿ ಮತ್ತು ಸುರತ್ಕಲ್‌ನ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಆಚಾರ್ಯ. ಬಿ ಅವರ ಪತ್ನಿ

Related Posts

Leave a Reply

Your email address will not be published.