ಪುತ್ತೂರು : ಪೊಲೀಸರ ಅಮಾನವೀಯ ವರ್ತನೆಗೆ ಕೆಂಡವಾದ ಹಿಂದೂ ಮುಖಂಡ ಅರುಣ್ ಪುತ್ತಿಲ

ಪುತ್ತೂರಿನಲ್ಲಿ ಬಿಜೆಪಿ ಮುಖಂಡರ ಭಾವಚಿತ್ರವುಳ್ಳ ಬ್ಯಾನರ್ ಮೇಲೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ದೌರ್ಜನ್ಯವೆಸಗಿದ ಪೋಲೀಸರ ವಿರುದ್ಧ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೆಂಡವಾಗಿದ್ದಾರೆ. ಡಿವೈಎಸ್ಪಿ, ಸಂಪ್ಯ ಠಾಣಾ ಎಸ್‍ಐ ಹಾಗೂ ಸಿಬ್ಬಂದಿ ವರ್ಗದ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂದು ಸಂಜೆಯೊಳಗಡೆ ದೌರ್ಜನ್ಯ ಎಸಗಿದ ಪೊಲೀಸರನ್ನು ಅಮಾನತುಗೊಳಿಸಬೇಕು, ಜೊತೆಗೆ ಪೆÇಲೀಸರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ ಪುತ್ತಿಲ ಈ ಘಟನೆ ಬಗ್ಗೆ ದ.ಕ ಎಸ್ಪಿಯವರಲ್ಲಿ ಮಾತನಾಡಿದ್ದೇನೆ, ಇಂದು ಎಸ್ಪಿ ವಿಚಾರಣೆಗಾಗಿ ಪುತ್ತೂರಿಗೆ ಭೇಟಿ ನೀಡುತ್ತಾರೆ. ಈ ದೌರ್ಜನ್ಯದ ಬಗ್ಗೆ ಮಾನವ ಹಕ್ಕಿಗೂ ದೂರು ನೀಡುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುತ್ತೂರಿನಲ್ಲಿ ಹಲವು ಘಟನೆ ನಡೆದಿದೆ, ಅದರಲ್ಲಿ ಈ ಪೊಲೀಸ್ ದೌರ್ಜನ್ಯ ಕೇಸ್ ಕೂಡ ಒಂದು. ಇವೆಲ್ಲವನ್ನು ಹಿಂದೂ ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದಕ್ಕೆ ಈ ಕೂಡಲೇ ಕಡಿವಾಣ ಹಾಕದಿದ್ದರೆ ಹಿಂದೂ ಸಂಘಟನೆ ಸಂಘರ್ಷಕ್ಕೂ ಸಿದ್ಧವಿದೆ. ಶಾಂತಿ ಸುವ್ಯವಸ್ಥೆ ಹದಗೆಟ್ಟಲ್ಲಿ ಇದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದರು.

Related Posts

Leave a Reply

Your email address will not be published.