ಪುತ್ತೂರು ಪೊಲೀಸ್ ದೌರ್ಜನ್ಯ ಪ್ರಕರಣ – ಆಸ್ಪತ್ರೆಗೆ ದಿ. ಹರ್ಷನ ಸಹೋದರಿ ಅಶ್ವಿನಿ ಭೇಟಿ
ಪುತ್ತೂರಿನಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾಯಕರ್ತರ ಆರೋಗ್ಯವನ್ನು ಶಿವಮೊಗ್ಗದ ದಿವಂಗತ ಹರ್ಷನ ಸಹೋದರಿ ಅಶ್ವಿನಿಯವರು ವಿಚಾರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅಶ್ವಿನಿ ಅವರು ಕಾರ್ಯಕರ್ತರ ಸ್ಥಿತಿಯನ್ನ ನೋಡಿ ತುಂಬಾ ಬೇಸರಗೊಂಡಿದ್ದೇನೆ.
ಇವತ್ತು ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ. ಕಾರ್ಯಕರ್ತರು ಹಿಂದೂ ಸಮಾಜ ಗಟ್ಟಿಗೊಳಿಸಲು ಹೋರಾಡ್ತಾ ಇದ್ದಾರೆ. ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಕಾರ್ಯಕರ್ತರು ಸಮಾಜಕ್ಕೆ ದ್ರೋಹ ಮಾಡ್ತಾ ಇಲ್ಲ. ಹಿಂದೂ ಕಾರ್ಯಕರ್ತರು ಯಾವತ್ತೂ ಕುಗ್ಗಲ್ಲ. ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ. ಅದನ್ನ ಗಮನದಲ್ಲಿಟ್ಟುಕೊಂಡು ಹಿಂದುತ್ವಕ್ಕೆ ಕೆಲಸ ಮಾಡಿ ಎಂದು ಹೇಳಿದರು.