ಪುತ್ತೂರು: ಫೆ.11ರಂದು ಯುವ ಕ್ರೀಡಾ ಸಂಭ್ರಮ-2024
ಪುತ್ತೂರು: ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2024 ಫೆ.11ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾ ಸಂಯೋಜಕ ಮಾಧವ ಗೌಡ ಪೆರಿಯತ್ತೋಡಿ ತಿಳಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಹಕಾರದೊಂದಿಗೆ ಪುತ್ತೂರು ತಾಲೂಕು ಮಟ್ಟದ ಕ್ರೀಡಾ ಸಂಭ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ ಗಂಟೆ 7.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿವೇಕಾನಂದ ಶಾಲಾ ಕ್ರೀಡಾಂಗಣದ ತನಕ ಕ್ರೀಡಾಜ್ಯೋತಿ ಜಾಥ ನಡೆಯಲಿದ್ದು, ಪ್ರಗತಿಪರ ಕೃಷಿಕರಾದ ಯಶೋಧ ಮೋನಪ್ಪ ಗೌಡ ತೆಂಕಪ್ಪಾಡಿ ಅವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಗಂಟೆ ೮.೪೫ಕ್ಕೆ ಪಡ್ನೂರಿನ ಊರ ಗೌಡರಾಗಿರುವ ಸಂಕಪ್ಪ ಗೌಡ ಕುಂಬಾಡಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಗಂಟೆ ೧೧ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಕ್ರೀಡಾ ಕಾರ್ಯದರ್ಶಿ ಪವನ್ ಗೌಡ ದೊಡ್ಡಮನೆ, ಬನ್ನೂರು ವಲಯದ ಅಧ್ಯಕ್ಷ ಮೋಹನ್ ಕಬಕ, ಸಂಘಟನಾ ಕಾರ್ಯದರ್ಶಿ ವಸಂತ ನೆಕ್ರಾಜೆ ಉಪಸ್ಥಿತರಿದ್ದರು.