ಪುತ್ತೂರು: ಜಿ.ಎಲ್. ಮಹಲ್ ನ ಭಾರತ್ ಸಿನಿಮಾದಲ್ಲಿ ಕಣ್ಣೂರು ಸ್ಕ್ವಾಡ್ ಸಿನಿಮಾ ವೀಕ್ಷಿಸಿದ ಪೊಲೀಸ್ ಅಧಿಕಾರಿಗಳು
ಪುತ್ತೂರು ಜಿಎಲ್ ಮಹಲಿನ ಭಾರತ್ ಸಿನಿಮಾ ಮಂದಿರದಲ್ಲಿ ಪೊಲಿಸ್ ಇಲಾಖೆಯ ವಿನಂತಿ ಮೇರೆಗೆ ಕಣ್ಣೂರ್ ಸ್ಕ್ವಾಡ್ ಸಿನಿಮಾ ವೀಕ್ಷಣೆಗೆ ಜಿಎಲ್ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
ಜಿ ಎಲ್ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಅವರ ಕಾರ್ಯವನ್ನು ಮೆಚ್ಚಿ ಪೊಲೀಸ್ ಇಲಾಖೆ ಅಭಿನಂದನಾ ಪತ್ರವನ್ನು ನೀಡಿ ಅಭಿನಂದಿಸಿದರು. ಇದೇ ವೇಳೆ ಜಿಎಲ್ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯರವರು ಮಾತನಾಡಿ, ಈ ಸಿನಿಮಾದ ವೀಕ್ಷಣೆ ಮೂಲಕ ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಇನ್ನಷ್ಟು ದಕ್ಷ ಮತ್ತು ಉತ್ತಮವಾಗಿ ಕೆಲಸವನ್ನು ನಿರ್ವಹಿಸಲು ಸಹಕಾರಿ ಯಾಗಬಲ್ಲದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.