ಪಡುಬಿದ್ರಿ: ಗೊಂದಲದೊಂದಿಗೆ ಆರಂಭಗೊಂಡ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮ
ನಾಮ್ಕಾವಸ್ಥೆಗೋ ಎಂಬಂತ್ತೆ ಸಮಾಜ ಕಲ್ಯಾಣ ಇಲಾಖೆ ಪಡುಬಿದ್ರಿಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಕೇಳಲಾದ ಪ್ರಶ್ನೆಗೆ ಸ್ವತಃ ಅಧಿಕಾರಿಗಳೇ ಉತ್ತರಿಸಲಾಗದೆ ತಡವರಿಸಿದ ಘಟನೆ ನಡೆಯಿತು.
ಸಮಾಜ ಕಲ್ಯಾಣ ಇಲಾಖೆ ಉಡುಪಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆ ಜಂಟಿಯಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದ ಸಭಾ ವೇದಿಕೆಗೆ ಹಾಕಲಾದ ಬ್ಯಾನರ್ ನಲ್ಲಿ ಅಸಾಮಾನತೆಯ ಬದಲಿಗೆ ದಲಿತರನ್ನು ನಿಂದಿಸುವ ಶಬ್ದ ಬಳಕೆ ಮಾಡಿದ್ದು ಸರಿಯೆ… ಎಂದು ದಲಿತ ಮುಖಂಡರಾದ ಲೋಕೇಶ್ ಕಂಚಿನಡ್ಕ, ವಿಠಲ್ ಮಾಸ್ತರ್, ಉಮಾನಾಥ್ ಪಡುಬಿದ್ರಿ, ಶಿವಾನಂದ್ ಕಲ್ಲಟ್ಟೆ ಪ್ರಶ್ನೆಯ ಸುರಿಮಳೆ ಗೈದಿದ್ದರು.
ಇದೇ ಸಂದರ್ಭ ಪೊಲೀಸ್ ಇಲಾಖೆಯಿಂದ ಆಗಮಿಸಿದ ಪಡುಬಿದ್ರಿ ಪೆÇಲೀಸ್ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್, ಪೆÇಲೀಸ್ ಇಲಾಖೆಯಲ್ಲಿ ಲಭ್ಯ ಇರುವ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳುವಂತ್ತೆ ಹಾಗೂ ಕಾನೂನಿನಲ್ಲಿ ದಲಿತ ಸಮೂದಾಯಕ್ಕೆ ದೊರಕ ಬಹುದಾದ ಪೆÇಲೀಸ್ ರಕ್ಷಣೆಯ ಬಗ್ಗೆ ತಿಳಿ ಹೇಳಿದ್ದಾರೆ.
ಇದೇ ಸಂದರ್ಭ ನ್ಯಾಯವಾದಿ ರಾಜೇಶ್ ಪಡುಬಿದ್ರಿ ದಲಿತ ಸಮೂದಾಯಕ್ಕೆ ಕಾನೂನಿನಡಿಯಲ್ಲಿ ಸಿಗ ಬಹುದಾದ ಎಲ್ಲಾ ಮಾಹಿತಿಗಳನ್ನು ಸವಿಸ್ತಾರವಾಗಿ ವಿವರಿಸಿದರು.ಈ ಸಂದರ್ಭ ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕ ರಮೇಶ್, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಹೇಮಚಂದ್ರ ಆರ್. ಸಾಲ್ಯಾನ್, ಮಾಜಿ ಅಧ್ಯಕ್ಷ ರವಿ ಶೆಟ್ಟಿ ಪಿಡಿಒ. ಮಂಜುನಾಥ್, ಕಾರ್ಯದರ್ಶಿ ರೂಪಕಲಾ ಹಾಗೂ ಗ್ರಾ.ಪಂ. ಸದಸ್ಯರನೇಕರು ಹಾಜರಿದ್ದರು.