ಪುತ್ತೂರು : ಅಪಹರಣಕ್ಕೊಳಗಾದ ಯುವಕ ಕೊಲೆ ಶಂಕೆ
ಪುತ್ತೂರಿನಲ್ಲಿ ನಡೆದ ಯುವಕ ಹನುಮಂತ ಅಪಹರಣ ಪ್ರಕರಣದ ಬಗ್ಗೆ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಪುತ್ತೂರಿನ ಕುಂಬ್ರ ಎಂಬಲ್ಲಿ ಜೆಸಿಬಿ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ನಿವಾಸಿ ಹನುಮಂತ (25) ಅವರನ್ನು ಮೂವರು ಅಪಹರಿಸಿ ಕೊಲೆ ಮಾಡಿ ಮೃತ ದೇಹವನ್ನು ಆಗುಂಬೆ ಘಾಟ್ ನಲ್ಲಿ ಎಸೆದಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಬಗ್ಗೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅಲ್ಲದೆ ಮೃತ ದೇಹ ಎಸೆದಿರುವುದಾಗಿ ಹೇಳಲಾದ ಆಗುಂಬೆ ಘಾಟ್ ಪ್ರದೇಶಕ್ಕೆ ಪುತ್ತೂರಿನ ಸಂಪ್ಯ ಪೊಲೀಸರು ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.