ನಾಟಿ ವೈದ್ಯೆ ಹೃದಯಾಘಾತಕ್ಕೆ ಬಲಿ
ನಂದಿಕೂರಿನ ಜನಪ್ರಿಯ ನಾಟಿ ವೈದ್ಯೆ ಯೊಬ್ಬರು ಇಂದು ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನಂದಿಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ರತ್ನಮ್ಮ(83) ವರ್ಷ ವಯಸ್ಸಾಗಿತ್ತು. ಯಾವುದೇ ಫಲಾಕ್ಷೇಪೆ ಬಯಸದೆ ನಾಟಿ ವೈಧ್ಯೆಯಾಗಿ ಜನರ ಸೇವೆ ಮಾಡುತ್ತಿದ್ದರು. ಹೊರ ಜಿಲ್ಲೆ ರಾಜ್ಯದಿಂದಲ್ಲೂ ಜನ ಇವರು ನೀಡುವ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದು, ಇದೀಗ ಇವರ ಅಗಲುವಿಕೆಯಿಂದ ಜನ ಉತ್ತಮ ನಾಟಿ ವೈಧ್ಯೆಯೊಬ್ಬರನ್ನು ಕಳೆದುಕೊಳ್ಳುವಂತ್ತಾಗಿದೆ. ಇವರು ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.