ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಪ್ರಹ್ಲಾದ ಮೂರ್ತಿ ಆಯ್ಕೆ
ಮೂಡುಬಿದಿರೆ: ಗಣರಾಜ್ಯೋತ್ಸವ ಹಾಗೂ ಪ್ರಧಾನಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಮೂಡುಬಿದಿರೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ಆಯ್ಕೆಯಾಗಿದ್ದಾರೆ.ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಜನವರಿ 27ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.ಈತ ಕಡಂದಲೆಯ ಸ್ಕಂದ ಪ್ರಸಾದ್ ಭಟ್- ರಾಜಲಕ್ಷ್ಮೀ ಎಂ.ಕೆ. ಅವರ ಪುತ್ರ.