ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧ : ಮಲ್ಪೆ ಬೀಚ್‌ನ ಉದ್ದಕ್ಕೂ ಸುರಕ್ಷತಾ ಬಲೆಗಳ ನಿರ್ಮಾಣ
ಉಡುಪಿ : ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಸುರಕ್ಷತಾ ಬೇಲಿಯನ್ನು ಅಳವಡಿಸಲಾಗಿದೆ. ಮುಂಗಾರು ಮಳೆ ಕಡಿಮೆಯಾಗಿದ್ದರೂ, ದೊಡ್ಡ ಅಲೆಗಳು ಸಮುದ್ರದ ತೀರಕ್ಕೆ ಅಪ್ಪಳಿಸುತ್ತಿದ್ದು ಸಮುದ್ರದ ಅಬ್ಬರ ಮುಂದುವರಿದಿದೆ. ಈ ಸಮಯದಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ.
ಈ ನಿಟ್ಟಿನಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ನ ಒಂದು ಕಿಲೋ ಮೀಟರ್ ವ್ಯಾಪ್ತಿಯ ಉದ್ದಕ್ಕೂ ಸುರಕ್ಷತಾ ಬಲೆಗಳನ್ನು ನಿರ್ಮಿಸಿದೆ. ಇದರೊಂದಿಗೆ ಎಚ್ಚರಿಕೆಯ ಸೂಚನೆಯಾಗಿ ಅಲ್ಲಲ್ಲಿ ಕೆಂಪು ಧ್ವಜಗಳನ್ನು ಅಳವಡಿಸಿದೆ. ಈ ಬೇಲಿ ದಾಟಿ ಯಾರು ಕೂಡ ಹೋಗುವಂತಿಲ್ಲ ಎಂಬ ಕಟ್ಟಪ್ಪಣೆ ಹೊರಡಿಸಲಾಗಿದೆ.
ಅದೇ ರೀತಿ ಬೀಚ್‌ನಲ್ಲಿ ಸೂಚನಾ ಫಲಕ ಅಳವಡಿಸಿ, ಎಚ್ಚರಿಕೆ ಸಂದೇಶವನ್ನು ಹಾಕಲಾಗಿದೆ. ಬೀಚ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗರು, ಸಾರ್ವಜನಿಕರು ಜೂ.1 ರಿಂದ ಸೆ.15ರವರೆಗೆ ಸಮುದ್ರಕ್ಕೆ ಇಳಿಯದಂತೆ ಫಲಕದಲ್ಲಿ ಎಚ್ಚರಿಕೆ ನೀಡಲಾಗಿದೆ.