ಮಂಗಳೂರು: ಎಸ್ ಸಿ ಎಸ್ ಪಿಯು ಕಾಲೇಜಿನಲ್ಲಿ ಕೋಚಿಂಗ್ ಅಕಾಡೆಮಿ ಉದ್ಘಾಟನೆ

ಮಂಗಳೂರಿನ ಅಶೋಕನಗರದಲ್ಲಿರುವ ಎಸ್.ಸಿ.ಎಸ್. ಪಿಯು ಕಾಲೇಜ್‌ನಲ್ಲಿ ಎಸ್.ಸಿ. ಎಸ್ ಕೋಚಿಂಗ್ ಅಕಾಡೆಮಿಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಎಸ್.ಸಿ. ಎಸ್ ಸಮೂಹ ಸಂಸ್ಥೆಗಳ ಸೆಕ್ರೆಟರಿ ಡಾ. ಅಭಿನಯ್ ಸೊರಕೆ ಮಾತನಾಡುತ್ತಾ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೋಚಿಂಗ್ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಡಾ. ರಾಜಾರಾಮ್ ಮಾತನಾಡಿ, ಕೋಚಿಂಗ್ ಸ್ವರೂಪ ಅಗತ್ಯತೆ ಹಾಗೂ ಅನಿವಾರ್ಯತೆಯ ಬಗ್ಗೆ ನಿಲುವು ನೀಡಿದರು. ಕಾರ್ಯಕ್ರಮದಲ್ಲಿ ರೇಖಾ. ಬಿ ಬೈಕಾಡಿ, ಡಾ ವಿಜಯ ಆಳ್ವ, ಶ್ರೀ ಯತಿನ್‌ರಾಜ್, ನಿತ್ಯಾನಂದ ನಾಯ್ಕ, ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿಯುಕಾಲೇಜಿನ ಪ್ರಾಂಶುಪಾಲರಾದ ಡಾ. ದಾಳಿಂಬ ಶ್ರೀಪತಿ ರಾವ್ ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ಪೂಜಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು