ಬ್ರಹ್ಮಾವರ: 3ನೇ ದಿನವೂ ಕಟ್ಟಡ ಸಾಮಾಗ್ರಿ ಸಾಗಾಟ ವಾಹನ ಮಾಲಕರ ಮುಷ್ಕರ, ಮಾತುಕತೆ, ವಿಫಲ
ಬ್ರಹ್ಮಾವರ : ಉಡುಪಿ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಸಾಗಾಟ ಸಾಮಗ್ರಿಗಳ ವಾಹನಗಳ ಮಾಲಕರು ಕಾರ್ಮಿಕರು 3ನೇ ದಿನವೂ ಮುಷ್ಕರವನ್ನು ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಡುಪಿ ಜಿಲ್ಲೆಯ ಐವರು ಶಾಸಕರು ಗಣಿ ಇಲಾಖೆ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಮೂಲಕ ಮುಷ್ಕರ ನಿರತರೊಂದಿಗೆ ನಡೆದ ಮಾತುಕತೆ ವಿಫಲತೆ ಕಂಡುಬಂದ ಹಿನ್ನೆಲೆಯಲ್ಲಿ ಅರ್ನಿಷ್ಟಾವಧಿ ಮುಷ್ಕರ ಮುಂದುವರಿಯುವ ಸೂಚನೆ ಕಂಡು ಬಂದಿದೆ.
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ ನಿಲ್ದಾಣದ ಬಳಿಯಿಂದ ಎಸ್‍ಎಂಎಸ್ ಕಾಲೇಜು ತನಕ ನೂರಾರು ಲಾರಿ, ಟೆಂಪೆÇಗಳು ಸಾಲಾಗಿ ನಿಲ್ಲಿಸಿ ಅದರ ಮಾಲಿಕರು, ಕಾರ್ಮಿಕರು, ಚಾಲಕರು ಕಳೆದ 3 ದಿನದಿಂದ ಶಾಂತಿಯುತ ಮುಷ್ಕರದಲ್ಲಿದ್ದಾರೆ. ಟಿಪ್ಪರ್ ಮಾಲಕರ ಸಂಘದ ವಿಜಯ ಕುಮಾರ್, ಸುಧಾಕರ ಶೆಟ್ಟಿ, ಮಟಪಾಡಿ ವಿಶ್ವನಾಥ್ ಶೆಟ್ಟಿ, ಸುಮತಿ ಸಂತೋಷ್ ಬಿರ್ತಿ ಮುಷ್ಕರದ ನೇತೃತ್ವ ವಹಿಸಿದ್ದು, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಮುಷ್ಕರದಲ್ಲಿ ನಿರತರಾಗಿದ್ದಾರೆ.