ಕರ್ನಾಟಕ ಸರಕಾರ ಆಹಾರ ಆಯೋಗದ ಸದಸ್ಯರಾಗಿ ಹಿರಿಯ ಕಾಂಗ್ರೆಸ್ಸಿಗ ಸುಮಂತ್ ರಾವ್ ಆಯ್ಕೆ
1991ರಿಂದ ವಿದ್ಯಾರ್ಥಿ ಕಾಂಗ್ರೆಸ್ ನಲ್ಲಿ (nsui ) ಗುರುತಿಸಿಕೊಂಡು ಯು. ಟಿ ಖಾದರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಹೋರಾಟವನ್ನು ಸಂಘಟಿಸಿಕೊಂಡು ಎನ್ ಎಸ್ ಯು ಐ ಯಲ್ಲಿ ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾವೂರಿನಲ್ಲಿ ಪರಿಚಯ ಕಲಾ ರಂಗ ಸಂಘವನ್ನು ಕಟ್ಟಿಕೊಂಡು ಮೊಸರು ಕುಡಿಕೆ ಉತ್ಸವವನ್ನು ಪ್ರಾರಂಭಿಸಿದರು. ಕಾವೂರು ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಕರ್ನಾಟಕ ಸರಕಾರ ಆಹಾರ ಆಯೋಗ ದಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.