ಬಂದೂಕು ಠೇವಣಿಯಿಂದ ವಿನಾಯಿತಿ ನೀಡುವಂತೆ ಶಿರಾಡಿ ಗಡಿನಾಡ ರಕ್ಷಣಾ ಸೇನೆ ಅಗ್ರಹ

ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ರೈತರು ತಮ್ಮ ಕೋವಿಗಳನ್ನು ಠೇವಣಿ ಇಡುವುದು ವಾಡಿಕೆಯಾಗಿದ್ದು, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯುವ ದೃಷ್ಠಿಯಿಂದ ಕ್ರಿಮಿನಲ್ ಹಿನ್ನೆಲೆಯವರನ್ನು ಹೊರತು ಪಡಿಸಿ ಉಳಿದ ಬಂದೂಕುದಾರರಿಗೆ ಠೇವಣಿಯಿಂದ ರಿಯಾತಿ ನೀಡಬೇಕು ಎಂದು ಶಿರಾಡಿ ಗಡಿನಾಡ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಸಾಜು ಜೇಕಬ್ ಶಿರಾಡಿ ಅಗ್ರಹಿಸಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರೈತರು ತಮ್ಮ ಕೃಷಿಯನ್ನು ಕಾಪಾಡಿಕೊಳ್ಳುವ ಉದ್ಧೇಶದಿಂದ ಬಂದೂಕು ಮನೆಯಲ್ಲಿಯೇ ಇರುವ ಅಗತ್ಯತೆಯಿದೆ. ಆದ್ದರಿಂದ ಪೆÇೀಲೀಸ್ ಠಾಣೆಯಲ್ಲಿ ಕೋವಿಯನ್ನು ಠೇವಣಾತಿ ಮಾಡುವುದಕ್ಕೆ ವಿನಾಯ್ತಿ ನೀಡಬೇಕು ಎಂದು ಹೇಳಿದರು. ಕಳೆದ ಮೂರು ನಾಲ್ಕು ತಿಂಗಳಲ್ಲಿ ಕಡಬ ತಾಲೂಕಿನಲ್ಲಿ ಆನೆ ದಾಳಿಯಿಂದ ಮೂರು ಜೀವ ಬಲಿಯಾಗಿದೆ, ಶಿರಾಡಿಯ ತಿಮ್ಮ ಹಾಗೂ ಅವರ ಪುತ್ರ ರಾತ್ರಿ ವಿದ್ಯುತ್ ಪಂಪು ಚಾಲು ಮಾಡಲು ಹೋದಗ ಆನೆ ದಾಳಿ ಮಾಡಿ ತಿಮ್ಮ ಅವರ ಮೃತಪಟ್ಟರೆ ಅವರ ಮಗ ಮರಣಾಂತಿಕ ಗಾಯಗಳಿಂದ ಪ್ರಾಣಾಪಾಅಯದಿಂದ ಪಾರಾಗಿದ್ದಾರೆ.

ಇತ್ತ ರೆಂಜಲಾಡಿಯಲ್ಲಿ ರಂಜಿತಾ ಹಾಗೂ ರಮೇಶ್ ರೈ ಎಂಬ ಇಬ್ಬರು ಅಮಾಯಕರಿಬ್ಬರನ್ನು ಆನೆ ನಿರ್ದಯವಾಗಿ ಕೊಂದು ಹಾಕಿದೆ. ತಾಲೂಕಿನಲ್ಲಿ ಶೇ 80 ಕೃಷಿಕರಿದ್ದು ಅವರು ವಿದ್ಯುತ್ ಸಮಸ್ಯೆಯ ಹಿನ್ನೆಲೆಯಲ್ಲಿ ರಾತ್ರಿ ತಮ್ಮ ತೋಟಗಳಿಗೆ ನೀರು ಹಾಯಿಸಲು ಹೋಗಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಕೋವಿಯಿಂದ ಶಬ್ದ ಮಾಡಿ ಕಾಡು ಪ್ರಾಣಿಗಳು ದೂರ ಹೋಗುವತೆ ಮಾಡಬೆಕಾದರೆ ಬಂದೂಕು ರೈತರ ಹತ್ತಿರ ಇರಬೇಕಾಗಿದೆ. ಇಲ್ಲಿನ ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ತಿಳಿದಿರುವ ಜಿಲ್ಲಾಧಿಕರಿಗಳು ಬಂದೂಕು ಠೇವಣಿಯ ವಿನಾಯಿತಿ ಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಸುದ್ದಿಗೋಷ್ಠಿಯಲ್ಲಿ ಗಡಿನಾಡ ರಕ್ಷಣಾ ಸೇನೆಯ ಪ್ರಮುಖರಾದ ಜೋಮೊನ್ ಎಂ.ಜೆ ಕಡಬ, ಲವಿನ್ ಪಿ.ಟಿ ಕಡಬ, ಸುವೀಶ್ ಟಿ.ಟಿ ಕಡಬ ಮತ್ತಿತರರು ಉಪಸ್ಥಿತರಿದ್ದರು.

comedy premier league season 4

Related Posts

Leave a Reply

Your email address will not be published.