ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : “ಪ್ರಕೃತಿಯೇ ದೇವರು” ಶ್ರೀ ಸೂರ್ಯನಾರಾಯಣ ಭಟ್ ಸಂದೇಶ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 24, 2023 ರ ಶುಕ್ರವಾರದಂದು ನಡೆದ ಅತಿರುದ್ರ ಮಹಾಯಾಗದ ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅರ್ಬಿಯ ಶ್ರೀ ವೈಷ್ಣವಿದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಜಯರಾಜ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಕಶೆಕೋಡಿಯ ಶ್ರೀ ಸೂರ್ಯನಾರಾಯಣ ಭಟ್, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಮಣಿಪಾಲದ ಆರ್. ರಾಜಪುರ ಸಾರಸ್ವತ ಮಹಾಸಭದ ಅಧ್ಯಕ್ಷರಾದ ಶ್ರೀಶ ನಾಯಕ್, ಬಾಲಾಜಿ ವೆಂಚರ್ಸ್ ನ ಉದ್ಯಮಿಯಾದ ದೇವೀಚರಣ್, ಹವ್ಯಾಕ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಡಾ. ಉದಯ ಶಂಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಶಿವರಾಯ್, ಕಾರ್ಯಕ್ರಮದ ಪೋಷಕರು ಹಾಗೂ ಧಾನಿಗಳಾದ ಮನೋಜ್ ಪ್ರಭು, ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ರಾಮದಾಸ್ ಶೆಟ್ಟಿಗಾರ್, ದೇವಸ್ಥಾನದ ಮೊಕ್ತೇಸರರಾದ ದಿನೇಶ್ ಪ್ರಭು, ಸುಭಾಕರ ಸಾಮಂತ್, ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ್, ಟ್ರಸ್ಟಿ ಸಂಜಯ ಪ್ರಭು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಉಪಸ್ಥಿತರಿದ್ದರು. ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಕಶೆಕೋಡಿಯ ಶ್ರೀ ಸೂರ್ಯನಾರಾಯಣ ಭಟ್ ಅವರು, ಪ್ರಕೃತಿ ಮಾತೆ, ಭಾರತವನ್ನು ಪ್ರೀತಿಸುತ್ತಾ, ಪೂಜಿಸುತ್ತಾ ನಮ್ಮ ಬದುಕು ಸಾಗಿಸಿದರೆ, ಜೀವನ ಸಾರ್ಥಕವಾಗುವುದು. ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ, ಆದರೆ ನಾವು ಪ್ರಕೃತಿಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ಈ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡು ಜೀವನ ಸಾಗಿಸಿದರೆ, ಬದುಕು ಸುಂದರವಾಗಲಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಪ್ರಕೃತಿಯೇ ದೇವರು ಎಂದು ಪ್ರಕೃತಿಯ ಸಂರಕ್ಷಣೆ ಮಾಡಬೇಕೆಂಬ ಸಂದೇಶವನ್ನು ನೀಡಿದರು. ಧಾರ್ಮಿಕ ಉಪನ್ಯಾಸದ ಬಳಿಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರ ‘ತುಳುನಾಡ ಗಾನ ಗಂಧರ್ವ ರಿಂದ “ಶಿವ ಗಾನಾಮೃತ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತ್ತು.

Related Posts

Leave a Reply

Your email address will not be published.