ಪುಟ್ಟ ಬಾಲಕಿಯ ಚಿಕಿತ್ಸೆಗಾಗಿ ವೇಷ ತೊಟ್ಟ ಶಟರ್ ಬಾಕ್ಸ್ ತಂಡ
ತುಳುನಾಡಿನ ಫೇಮಸ್ ಯ್ಯೂಟ್ಯೂಬರ್ ಸಚಿನ್ ಶೆಟ್ಟಿ ಕೈಗೊಂಡಿರುವ ಸಾಮಾಜಿಕ ಕೈಕಂರ್ಯಕ್ಕೆ ಎಲ್ಲೆಡೆಯಿಂದ ಭಾರೀ ಪ್ರಶಂಸೆಗಳು ಕೇಳಿ ಬರ್ತಾ ಇದೆ.
ಹೆಬ್ರಿಯ ಕುಚ್ಚೂರು ಗ್ರಾಮದ ಸಾನ್ವಿ ಎನ್ನುವ ಪುಟ್ಟ ಬಾಲಕಿಗೆ ತಲಸೆಮಿಯಾ ಮೆಜರ್ ಎನ್ನುವ ರೋಗದ ಬಳಲುತ್ತಿದ್ದು ,ಇದಕ್ಕೆ ಬೋನ್ ಮ್ಯಾರೊವ್ ಎನ್ನುವ ಚಿಕಿತ್ಸೆಗಾಗಿ ನಲ್ವತ್ತು ಲಕ್ಷ ಹಣದ ಅವಶ್ಯಕತೆಯಿತ್ತು.ಇದನ್ನ ಅರಿತ ಸಚಿನ್ ಶೆಟ್ಟಿಯವರ ತಂಡ ಅಷ್ಟಮಿಯ ದಿನ ವೇಷ ಧರಿಸಿ ಧನ ಸಹಾಯಕ್ಕೆ ಮುಂದಾಗಿದ್ದರು.ಅಚ್ಚರಿಯ ಸಂಗತಿ ಏನಂದ್ರೆ ಒಂದೇ ದಿನ ವೇಷ ಹಾಕಿ ಸಂಗ್ರಹಿಸಿದ ಮೊತ್ತ ಸರಿಸುಮಾರು ಹತ್ತು ಲಕ್ಷ ಅನ್ನೋದು ಎಲ್ಲರ ಹುಬ್ಬೇರಿಸಿದೆ.
ಇಡೀ ತಂಡ ಸೊಶಿಯಲ್ ಮೀಡಿಯಾದಲ್ಲಿ ಬಾಲಕಿಯ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದರು.ಒಂದೆರಡು ಲಕ್ಷ ಹಣ ಸಂಗ್ರಹಿಸಿ ಬಾಲಕಿಯ ಕುಟುಂಬಸ್ಥರಿಗೆ ಹಸ್ತಾಂತರಿಸುವ ಯೋಚನೆ ಅವರದ್ದಾಗಿತ್ತು.ಅದ್ರೆ ಇಡೀ ತಂಡಕ್ಕೆ ಉಡುಪಿಯ ಜನತೆ ಶಾಕ್ ನೀಡಿತ್ತು.ಯ್ಯೂಟ್ಯೂಬರ್ ಒಬ್ಬರ ಮನವಿಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ.ಸದ್ಯ ಸಚಿನ್ ಶೆಟ್ಟಿ ಮತ್ತು ಅವರ ತಂಡ ,ಸಾರ್ವಜನಿಕರಿಂದ ಬಂದಂತಹ ಎಲ್ಲಾ ಮೊತ್ತವನ್ನು ಬಾಲಕಿ ಸಾನ್ವಿ ಮನೆಗೆ ತೆರಳಿ ಹಸ್ತಾಂತರಿಸಿದ್ದಾರೆ.ಜೊತೆಗೆ ಇನ್ನಿತರ ಸಂಘ ಸಂಸ್ಥೆಗಳು ಕೂಡ ತಮ್ಮಕೈಲಾದಷ್ಟು ಮೊತ್ತವನ್ನು ನೀಡಿದ್ದಾರೆ ಇನ್ನೂ ಸುಮಾರು ಹದಿನೈದು ಲಕ್ಷದ ವರೆಗೆ ಹಣದ ಸಂಗ್ರಹವಾಗಬೇಕಾಗಿದೆ ದಾನಿಗಳು ಸಹಕರಿಸುವಂತೆ ಶಟರ್ ಬಾಕ್ಸ್ ತಂಡ ಹಾಗೂ ಸಾನ್ವಿ ಹೆತ್ತವರು ಮನವಿ ಮಾಡಿದ್ದಾರೆ.