ಕಾರ್ಕಳ: ಅತ್ತೂರು ಬಸಿಲಿಕದ ವಾರ್ಷಿಕೋತ್ಸವ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ. ಖಾದರ್

ಕಾರ್ಕಳದ ಅತ್ತೂರು ಬಸಿಲಕದ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಭೇಟಿ ನೀಡಿ ಮೊಂಬತ್ತಿ ಬೆಳಗಿದರು.

ಮಂಗಳೂರು ಧರ್ಮ ಪ್ರಾಂತ್ಯದ ಗುರುಗಳಾದ ವಂದನೀಯ ವಾಲ್ಟರ್ ಡಿ ಮೇಲ್ಲೋರವರು ಜನರು ಪ್ರಭೇದನೆಗಳಿಗೆ ಒಳಗಾಗದಂತೆ ಪ್ರಾರ್ಥಿಸೋಣ ಎಂಬ ವಿಷಯದ ಬಗ್ಗೆ ಭಕ್ತಾದಿಗಳಿಗೆ ದೇವರ ವಿಶೇಷ ಸಂದೇಶ ನೀಡಿದರು. ಪ್ರಭೇದನಿಗೆ ಒಳಗಾಗದಂತೆ ಒಂದು ದಿನದ ವಿಷಯವನ್ನು ಧ್ಯಾನಿಸಿ ಅವರು ಗಾಯನ ಬಲಿ ಪೂಜೆ ನೆರವೇರಿಸಿ ಪ್ರವಚನ ನೀಡಿದರು. ಅತ್ತೂರು ಬಸಲಿಕ ಲಾರೆನ್ಸ್ ಪುಣ್ಯಕ್ಷೇತ್ರವು ವಿಶೇಷ ವಿದ್ಯುತ್ ದೀಪಗಳಿಂದ ಬಹು ದೂರದವರೆಗೆ ಕಂಗೊಳಿಸುತ್ತಿತ್ತು. ಇಂದು ಸಾವಿರಾರು ಜನರು ಕ್ಷೇತ್ರಕ್ಕೆ ಭೇಟಿ ನೀಡಿ ಸಂಪುಟದ ದಿವ್ಯ ದರ್ಶನ ಪಡೆದು ಪಾವನರಾದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆಯ ಮೊಂಬತ್ತಿಯನ್ನು ಬೆಳಗಿಸಿದರು.
