ಪಚ್ಚನಾಡಿ ದೇವಿನಗರದಲ್ಲಿ ಬಹಳ ಅದ್ದೂರಿಯಿಂದ ನಡೆದ SRR ವಾಲಿಬಾಲ್ 2K23 ಪಂದ್ಯಾಕೂಟ

ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ದಿನಾಂಕ 30/07/2023 ರ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ಈವೆಂಟ್ಸ್ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್(ರಿ) ಪಚ್ಚನಾಡಿ ಇವರ ನೇತೃತ್ವದಲ್ಲಿ SRR Tropy 2K23 ಸ್ಥಳೀಯ ಮಟ್ಟದ ವಾಲಿಬಾಲ್ ಪಂದ್ಯಾಕೂಟವು ಬಹಳ ವಿಜೃಂಭಣೆಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ನೆರವೇರಿತು.

SRR Volleyball 2K23


. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸತೀಶ್ ಬಂದಲೆ ( ಧರ್ಮದರ್ಶಿಗಳು ಶ್ರೀಮಂತ ರಾಜ ಗುಳಿಗ ಕ್ಷೇತ್ರ ಹಾಗೂ ತುಳು ರಂಗಭೂಮಿ ಕಲಾವಿದರು), ಶ್ರೀ ವಿನಾಯಕ ಭಟ್ (ಪುರೋಹಿತರು ದೇವರ ಪದವು ವಾಮಂಜೂರು), ಶ್ರೀ ಸಾಹಿಲ್ ಜಾಹಿರ್ (ಅಂತಾರಾಷ್ಟ್ರೀಯ ನಿರೂಪಕರು ), ಶ್ರೀ ಮೋಹನ್ ಪಚ್ಚನಾಡಿ (ಗೌರವ ಅಧ್ಯಕ್ಷರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ), ಶ್ರೀ ವಿಠಲ್ ಶೆಟ್ಟಿ (ಅಧ್ಯಕ್ಷರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಪಚ್ಚನಾಡಿ), ಶ್ರೀ ಶೇಖರ್ ಪದವಿನಂಗಡಿ (ಉದ್ಯಮಿ), ಶ್ರೀ ರಾಜೇಶ್ ಕುಲಾಲ್ (ಅಧ್ಯಕ್ಷರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ), ಶ್ರೀ ಮನೋಹರ್ ಎಮ್ ಎಸ್ (ಪ್ರಮುಖರು ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ), ಶ್ರೀಮತಿ ರಜನಿ ಶೆಟ್ಟಿ (ಪ್ರಾಣಿ ಪೋಷಕರು ಪ್ರಾಣಿ ಪ್ರಿಯರು ), ಪ್ರಾಂಕ್ಲಿನ್ ಮೊಂತೆರೊ (ಕೃಷಿಕರು ಹಾಗೂ ರೈಲು ಅಪಘಾತವನ್ನು ತಡೆದವರು), ಶ್ರೀಮತಿ ಲಾಲಿನಿ (ಪ್ರಮುಖರು ಶ್ರೀ ದೇವಿ ಮಾತೃ ಮಂಡಳಿ), ಶ್ರೀ ಪವನ್ ರಾಜ್ ಪಚ್ಚನಾಡಿ (ಯುವ ಉದ್ಯಮಿ SRR ಈವೆಂಟ್ಸ್ ಮಂಗಳೂರು) ವೇದಿಕೆಯಲ್ಲಿದ್ದರು.


ಅತಿಥಿಗಳಿಂದ ದೀಪ ಪ್ರಜ್ವಲನೆಗೊಂಡು ಕುಮಾರಿ ಸಾನ್ವಿ ಎಮ್ ಇವರಿಂದ ಗಣೇಶನ ಸ್ತುತಿಃಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ಸತೀಶ್ ಬಂದಲೆಯವರು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಪಚ್ಚನಾಡಿಯಲ್ಲಿ ಬಹಳಷ್ಟು ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪಚ್ಚನಾಡಿಯ ಜನತೆಗೆ ಕೊಡುಗೆಯನ್ನು ನೀಡುತ್ತಿದೆ. ಈ ಬಾರಿ SRR ತಂಡವು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಜೊತೆಗೂಡಿ ಪಚ್ಚನಾಡಿ ಯುವಕರ ಒಗ್ಗಟ್ಟಿಗಾಗಿ SRR Trophy 2K23 ವಾಲಿಬಾಲ್ ಪಂದ್ಯಕೂಟವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲಿ ಎಂದು ಹಾರೈಸುತ್ತಾ ಈ ದಿನ ವರುಣನ ಕೃಪೆಯು ಈ ತಂಡಕ್ಕೆ ಇದೆ ಎಂದು ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸಾಹಿಲ್ ಜಾಹಿರ್ ಮಾತನಾಡುತ್ತಾ ವೇದಿಕೆಯಲ್ಲಿ ಹಾಗೂ ಪಂದ್ಯಾಕೂಟದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಧರ್ಮದವರನ್ನು ಸೇರಿಸಿಕೊಂಡು ಯಾವುದೇ ಜಾತಿ ಬೇದವಿಲ್ಲದೆ ಸಮಾಜದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವ ಸಂದೇಶವನ್ನು ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಹಾಗೂ SRR ತಂಡವು ಸಮಾಜಕ್ಕೆ ನೀಡಿದೆ.

ಇದು ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ. ಎಲ್ಲಾ ಜಾತಿ ಧರ್ಮದವರು ಕೂಡಿ ಬಾಳಬೇಕಾದ ಅನಿವಾರ್ಯತೆ ಈ ದೇಶಕ್ಕಿದೆ. ಅದು ನಮ್ಮ ಪರಂಪರೆ ಹಾಗೂ ಸಂಸ್ಕೃತಿ. ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಈ ವೇದಿಕೆಯಲ್ಲಿ ಬಹಳ ವರ್ಷಗಳಿಂದಲೂ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಅವರ ಕೆಲವು ಕಾರ್ಯಕ್ರಮಗಳಲ್ಲಿ ನಾನು ಕೂಡ ಭಾಗವಹಿಸಿದ್ದೆ. ಇಲ್ಲಿಯ ಜನತೆ ಕೂಡ ಇವರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದು ಮುಕ್ತ ಕಂಠದಿಂದ ಹಾಡಿ ಹೊಗಳಿದರು. ನಂತರ ಮಾತನಾಡಿದ ಮೋಹನ್ ಪಚ್ಚನಾಡಿಯವರು ಸ್ನೇಹಿತರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಪುರಾಣದಲ್ಲಿ ಶ್ರೀ ಕೃಷ್ಣ ಕುಚೇಲರ ಸ್ನೇಹವನ್ನು ವಿಶ್ಲೇಷಿಸುತ್ತಾ ಸ್ನೇಹಕ್ಕೆ ಬಡವ ಶ್ರೀಮಂತ ಅಥವಾ ಮೇಲುಕೀಳೆಂಬ ಯಾವುದೇ ಬೇದಭಾವವಿಲ್ಲ ಎನ್ನುವ ಸಂದೇಶವನ್ನು ಕೊಟ್ಟರೆ ಮಹಾಭಾರತದಲ್ಲಿ ಕರ್ಣ ಮತ್ತು ದುರ್ಯೋದನ ಸ್ನೇಹವನ್ನು ವಿಶ್ಲೇಷಿಸುತ್ತಾ ಕುಂತಿ ಪುತ್ರ ದಾನಶೂರ ಕರ್ಣನು ದುರ್ಯೋದನನ ಸ್ನೇಹದಿಂದಾಗಿ ಅವನತಿಯನ್ನು ಹೊಂದಿದನು. ಇಲ್ಲಿ ಸ್ನೇಹಿತರನ್ನು ಆರಿಸುವಾಗ ಒಳ್ಳೆಯ ಸ್ನೇಹಿತರನ್ನು ಆರಿಸಬೇಕು ಎನ್ನುವ ಸಂದೇಶವನ್ನು ಸಾರುತ್ತದೆ ಎಂದರು. ಪಚ್ಚನಾಡಿಯ ಯುವ ಜನತೆ ಪ್ರೀತಿ ವಿಶ್ವಾಸ ಸ್ನೇಹದಿಂದ ಕೂಡಿಬಾಳಬೇಕು ಎನ್ನುವ ಸದುದ್ದೇಶದಿಂದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಹಾಗೂ SRR ತಂಡವು ಈ ಒಂದು ಪಂದ್ಯಾಕೂಟವನ್ನು ಹಮ್ಮಿಕೊಂಡಿದೆ. ಇವರ ಉದ್ದೇಶವು ಸಾರ್ಥಕವಾಗುವ ರೀತಿಯಲ್ಲಿ ಎಲ್ಲಾ ತಂಡಗಳ ಸದಸ್ಯರು ಹಾಗೂ ಕ್ರೀಡಾ ಅಭಿಮಾನಿಗಳು ಸಹಕರಿಸಬೇಕು ಎಂದು ನುಡಿದರು. ಈ ಒಂದು ಪಂದ್ಯಾಕೂಟ ಏರ್ಪಡಿಸಲು ಸುಮಾರು ಒಂದು ತಿಂಗಳಿಂದ ತಂಡದ ಸದಸ್ಯರು ಶ್ರಮವಹಿಸಿದ್ದಾರೆ ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಿದರು.


. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೆರೆದಿದ್ದ ಎಲ್ಲರೂ ರಾಷ್ಟಗೀತೆ ಜನಗಣಮನ ಹಾಡುವುದರ ಜೊತೆಗೆ ಶ್ರೀ ವಿನಾಯಕ ಭಟ್ ಅವರ ದಿವ್ಯ ಹಸ್ತದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಪಂದ್ಯಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಪಂದ್ಯಾಕೂಟದಲ್ಲಿ ಸ್ಥಳೀಯ ಮಟ್ಟದ 16 ತಂಡಗಳು ಭಾಗವಯಿಸಿ ಜಿದ್ದಾಜಿದ್ದಿನ ಹೋರಾಟದ ಮೂಲಕ ಪ್ರೇಕ್ಷಕರ ಮನರಂಜಿಸಿದರು. ಪಂದ್ಯಕೂಟದುದ್ದಕ್ಕೂ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನ ಪ್ರೇಕ್ಷಕರ ಕರತಾಡನದ ಬೆಂಬಲದೊಂದಿಗೆ ರೆಡ್ ವಿಂಗ್ಸ್ ತಂಡವು ಪ್ರಥಮ ಸ್ಥಾನದಲ್ಲಿ ವಿಜಯಶಾಲಿಯಾದರೆ, ಹಾರ್ದಿಕ್ ಫ್ರೆಂಡ್ಸ್ ದ್ವೀತಿಯ ಸ್ಥಾನವನ್ನು ಅಲಂಕರಿಸಿತು.


. ಬಹುಮಾನ ವಿತರಣೆಯ ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ರಾಜಾರಾಮ್ ಭಟ್(ಅರ್ಚಕರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ) , ಶ್ರೀ ಅರುಣ್ ಕುಮಾರ್ (ಉದ್ಯಮಿ), ಶ್ರೀ ಜೀವೇಂದ್ರ ಗಟ್ಟಿ (ನಿವೃತ್ತ ಸೈನಿಕರು), ಶ್ರೀ ಮೋಹನ್ ಪಚ್ಚನಾಡಿ, ಶ್ರೀ ಸುನಿಲ್ (ಉದ್ಯಮಿ), ಶ್ರೀ ವಿಶಾಲ್ ಪೈ (ಉದ್ಯಮಿ), ಶ್ರೀ ರಾಜೇಶ್ ರೋಷನ್ ಮೊಂತೆರೊ, ಶ್ರೀ ರಾಜೇಶ್ ಕುಲಾಲ್, ಶ್ರೀ ಹೇಮಚಂದ್ರ ಶೆಟ್ಟಿ (ಯುವ ಉದ್ಯಮಿ), ಶ್ರೀ ಮಹಮ್ಮದ್ ಮುಸ್ತಾಪ, ಶ್ರೀ ಕಿರಣ್ ಸಂತೋಷನಗರ, ಶ್ರೀ ಪವನ್ ರಾಜ್ ಪಚ್ಚನಾಡಿ ಅತಿಥಿಗಳಾಗಿ ಭಾಗವಯಿಸಿದ್ದರು.


. ನಟರಾಜ್ ಪಚ್ಚನಾಡಿ ಹಾಗೂ ಭವ್ಯಾ ವಿಜಿತ್ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ದೇವಿನಗರ ವಂದಿಸಿದರು. ಪವನ್ ರಾಜ್, ಪ್ರವೀಣ್ ಕುಮಾರ್ ಶೆಟ್ಟಿ, ಸುಕೇಶ್, ವಿಜಿತ್, ಚೇತನ್, ಕಿಶನ್, ರಾಜೇಶ್,ಪ್ರತಾಪ್, ಜೃತೇಶ್ ಗಟ್ಟಿ, ನಿಖರಾಜ್, ವಿಗ್ನೇಶ್, ಸಂದೇಶ್ ಶೆಟ್ಟಿ, ಡಿಜೆ ಮನೀಶ್, ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಸದಸ್ಯರು, ಶ್ರೀ ದೇವಿ ಮಾತೃ ಮಂಡಳಿ ಸದಸ್ಯರು ಹಾಗೂ SRR ತಂಡದ ಸದಸ್ಯರು ಸಹಕರಿಸಿದರು. ಸನ್ ಆರ್ಟ್ಸ್ ಯುಟ್ಯೂಬರ್ ಕಾರ್ಯಕ್ರಮದ ಲೈವ್ ಚಿತ್ರೀಕರಣ ಮಾಡಿ ಸಹಕರಿಸಿದರು.

Related Posts

Leave a Reply

Your email address will not be published.