ಪಡುಬಿದ್ರಿ ಬೀಚ್‌ಗೆ ಆಗಮಿಸಲಿರುವ ಸಿಎಂ : ಪೊಲೀಸ್ ಕಟ್ಟೆಚರ, ತಾತ್ಕಾಲಿಕ ರಸ್ತೆ ದುರಸ್ಥಿ ಕಾರ್ಯ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಡುಬಿದ್ರಿ ಕಡಲು ಕೊರೆತ ವೀಕ್ಷಣೆಗಾಗಿ ಇಲ್ಲಿನ ಮುಖ್ಯ ಬೀಚ್ ಗೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸ್ ಕಟ್ಟೆಚರ ವಹಿಸಲಾಗಿದೆ.

ಪಡುಬಿದ್ರಿಯ ಪ್ರಸಿದ್ಧ ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲು ಕೊರೆತದಿಂದ ಆದ ಹಾನಿಯ ಬಗ್ಗೆ ವೀಕ್ಷಣೆ ಮಾಡಬೇಕಾಗಿದ್ದರೂ ಅಂತಿಮ ಕ್ಷಣದಲ್ಲಿ ಬದಲಾಗಿ ಬಾರೀ ಹಾನಿಯಾದ ಮುಖ್ಯ ಬೀಚ್‌ನ್ನು ಮುಖ್ಯ ಮಂತ್ರಿಗಳು ವೀಕ್ಷಣೆ ನಡೆಸಲಿದ್ದಾರೆ.ಮುಖ್ಯ ಮಂತ್ರಿಗಳು ಬರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಬೀಚ್ ಸಂಪರ್ಕ ರಸ್ತೆ ಇದಾಗಿದ್ದರೂ ಡಾಮಾರು ಕಾಣದೆ ಹೊಂಡಮಯವಾದ ರಸ್ತೆಗೆ ತಾತ್ಕಾಲಿಕ ಜಲ್ಲಿಕಲ್ಲಿಗೆ ಕ್ರಷರ್ ಪುಡಿ ಮಿಶ್ರಮಾಡಿ ಹಾಕುವ ಕಾರ್ಯ ನಡೆಯುತ್ತಿದೆ. ಅದಲ್ಲದೆ ಪೊದೆಯಿಂದ ಕೂಡಿದ ರಸ್ತೆಯಂಚಿನ ಗಿಡಗಂಟಿಗಳನ್ನು ಕತ್ತರಿಸುವ ಕಾರ್ಯ ಕೂಡಾ ನಡೆಯುತ್ತಿದೆ. ಒಟ್ಟಿನಲ್ಲಿ ಜನ ಸಾಮಾನ್ಯರು ನಿತ್ಯ ಸಂಚರಿಸುವ ಹೊಂಡಮಯ ರಸ್ತೆಗೆ ವಿಐಪಿಗಳ ಆಗಮನವಾದಾಗಲಾದರೂ ತಾತ್ಕಾಲಿಕ ಮುಕ್ತಿ ಸಿಕ್ಕಿದ ಸಂತೋಷವನ್ನು ಜನ ವ್ಯಕ್ತ ಪಡಿಸಿದ್ದಾರೆ.
