ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ವಿಳಂಬ ; ಕೂಡಲೇ ಬಿಡುಗಡೆಗೊಳಿಸಲು DHS ಒತ್ತಾಯ

ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯ ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ತೀರಾ ವಿಳಂಬವಾಗಿದ್ದು ,ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ದಲಿತ ಹಕ್ಕುಗಳ ಸಮಿತಿ( DHS ) ಯ ಮಂಗಳೂರು ನಗರ ಸಮಿತಿಯು ಮನಪಾದ ಆಯುಕ್ತರು ಹಾಗೂ ಮೇಯರ್ ರವರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದೆ.

ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದ ನಿವಾಸಿ ಪದ್ಮ ಎಂಬ ದಲಿತ ಮಹಿಳೆಯ ಪಾಳುಬಿದ್ದ ಮನೆಯು ಕಳೆದ ವರ್ಷದ ಮಳೆಗಾಲದ ಸಮಯಕ್ಕೆ ಕುಸಿದು ಬಿದ್ದು,ಅದಾಗಲೇ ಮಾದ್ಯಮದ ಮೂಲಕ ದೊಡ್ಡ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಮನಪಾ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು.ಬಳಿಕ ಯಾವುದೇ ಸುದ್ದಿ ಇಲ್ಲದಾಗ ಸ್ಥಳೀಯರ ಸಹಕಾರದಲ್ಲಿ ನೂತನ ಮನೆ ನಿರ್ಮಿಸಲು ವ್ಯವಸ್ಥೆ ಮಾಡಲಾಗಿ ಮನಪಾದ ಪ್ರಾಕೃತಿಕ ವಿಕೋಪದ ನಿಧಿಯಿಂದ ಈಗಾಗಲೇ 2 ಬಾರಿ ಹಣ ಸಿಕ್ಕಿದ್ದು,3 ನೇ ಹಂತದ ಹಣಕ್ಕೆ ಸತಾಯಿಸಲಾಗುತ್ತಿದೆ. ಒಟ್ಟಿನಲ್ಲಿ ದಲಿತ ಸಮುದಾಯದ ಇಂತಹ ಗಂಭೀರ ಪ್ರಶ್ನೆಗಳು ಬಂದಾಗ ಕೂಡಲೇ ಸ್ಪಂದನ ಮಾಡುವ ಬದಲಾಗಿ ಅವರನ್ನು ಈ ನಮೂನೆ ಸತಾಯಿಸುವುದು ಸರಿಯೇ…? ಎಂದು DHS ಪ್ರಶ್ನಿಸಿದೆ.

ಮನವಿ ಸ್ವೀಕರಿಸಿದ ಮೇಯರ್ ಹಾಗೂ ಆಯುಕ್ತರು ಕೂಡಲೇ ಸ್ಪಂದಿಸುವ ಭರವಸೆ ನೀಡಿದರು.ನಿಯೋಗದಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್,ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಪ್ರಶಾಂತ್ ಎಂ ಬಿ, ರಘುವೀರ್, ನಾಗೇಂದ್ರ,DYFI ನಾಯಕರಾದ ಮನೋಜ್ ಕುಲಾಲ್, ಸುಕೇಶ್, ಪ್ರಶಾಂತ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.