ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಸ್ಪೂರ್ತಿಯನ್ನು ತುಂಬುತ್ತದೆ : ಪ್ರತಿಭಾ ಕುಳಾಯಿ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳಿಗೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ತಿರುಗೇಟು ನೀಡಿದ್ದು, ಟ್ರೋಲ್ ಮಾಡಿ ನನ್ನ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ,ಅದಕ್ಕೆ ಹೆದರುವ ಹೆಣ್ಣು ಮಗಳು ಅಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಮಂಗಳೂರಿನ ಮಹಾಜನಗಳೇ ನೀವು ನನ್ನ ವಿರುದ್ದ ಮಾಡುತ್ತಿರುವ ಟ್ರೋಲ್ ನನ್ನಲ್ಲಿ ಇನ್ನಷ್ಟು ನಿಮ್ಮ ಪರವಾಗಿ ನಿಲ್ಲಲು ಮತ್ತು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಳ್ಳಲು ಶಕ್ತಿ ಸ್ಪೂರ್ತಿಯನ್ನು ತುಂಬುತ್ತದೆ ನಿಮ್ಮ ಅಭಿಮಾನಕ್ಕೆ ಚಿರಋಣಿ ಎಂದು ಪೆÇೀಸ್ಟ್ ಮಾಡಿದ್ದಾರೆ.ಅಲ್ಲದೆ ಬಿಜೆಪಿ ಪರ ಆಕ್ರೋಶ ವ್ಯಕ್ತಪಡಿಸಿರುವ ಅವರು ವಸೂಲಿ ಟೋಲ್ ವಿರೋಧಿ ಜನಪರ ಹೋರಾಟವನ್ನು ನಿಮ್ಮ ಟ್ರೋಲ್ ಅಸ್ತ್ರದಿಂದ ನಿಲ್ಲಿಸಲಾಗದು ಎಂದಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಗೆ ತೆಗೆಯಲು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡೆ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರ ವಿಡಿಯೋ ಇದೀಗ ಟ್ರೋಲ್ ಆಗುತ್ತಿದ್ದು,
ಪೊಲೀಸರು ಪ್ರತಿಭಾ ಕುಳಾಯಿ ಅವರನ್ನು ವಶಕ್ಕೆ ಪಡೆಯುವ ಸಂದರ್ಭ ಅರಚುವ ಮೂಲಕ ರೌದ್ರಾವತಾರ ತೋರಿದ್ದರು, ಈ ವಿಡಿಯೋವನ್ನು ಇದೀಗ ವಿಭಿನ್ನ ವಿಭಿನ್ನವಾಗಿ ಎಡಿಟ್ ಮಾಡುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ.