ವರ್ಷಂಪ್ರತಿಯಂತೆ ನಡೆಯುವ ಗುರುಪೌರ್ಣಮಿ ಪ್ರಯುಕ್ತದ ಗುರುಪೂಜೆ- ವಂದನೆಯ ಜೊತೆಜೊತೆಗೆ 2024- 2025 ನೇ ಸಾಲಿನ ನೂತನ ತರಗತಿಗಳ ಉದ್ಘಾಟನೆ ಮತ್ತು 2015-2016 ನೇ ಸಾಲಿನಲ್ಲಿ ತನ್ನ ಕಾರ್ಯಚಟುವಟಿಕೆ ಪ್ರಾರಂಭಿಸಿದ ನಮ್ಮ ಅಭ್ಯಾಸ ಕೇಂದ್ರ ಈ ವರ್ಷಪೂರ್ತಿ ನಡೆಸಲುದ್ದೇಶಿಸಿರುವ ದಶಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಕೂಡ ನೆರೆದ ಗಣ್ಯರ ಸಮಕ್ಷ ದೀಪ ಬೆಳಗಿಸುವ ಮೂಲಕ
ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ (YAKU) ಪ್ರಾಯೋಜಕತ್ವದಲ್ಲಿ ದುಬಾಯಿ ಅಥವಾ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2023-2024 ನೇ ಸಾಲಿನ ಪ್ರಶಸ್ತಿಗೆ, ಸ್ಥಳೀಯ ಯಕ್ಷಗಾನ ಹಿಮ್ಮೇಳ ಕಲಾವಿದರೂ, ನಮ್ಮ ಯಕ್ಷಗಾನ ಅಭ್ಯಾಸ ಕೇಂದ್ರದ ಹಿರಿಯ ಸದಸ್ಯರೂ ಆದ ಶ್ರೀಯುತ ವೆಂಕಟೇಶ ಶಾಸ್ತ್ರಿ ಪುತ್ತಿಗೆಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಶ್ರೀಯುತ ವೆಂಕಟೇಶ
ದುಬಾಯಿಯಲ್ಲಿ ಅಸ್ಥಿರ ಹವಾಮಾನ ಮುಂದುವರಿದಿದ್ದು ಸುರಕ್ಷತೆಯ ದೃಷ್ಟಿಯಿಂದ ನಾಗರಿಕರು ಬೀಚ್‍ಗಳಿಗೆ ಹೋಗದಂತೆ ಮತ್ತು ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ದುಬಾಯಿ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಎಎಇ- ಅರಬ್ ಅಮೀರರ ಎಮಿರೇಟ್ಸ್ ಇನ್ನಷ್ಟು ಹವಾಮಾನ ವೈಪರೀತ್ಯಗಳನ್ನು ಕಾಣಲಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಈಗಾಗಲೇ ದುಬಾಯಿಯಲ್ಲಿ ಮಳೆಯಾಗುತ್ತಿದ್ದು, ಅದು ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯು ಹೇಳಿದೆ. ದೊಡ್ಡ
ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧವಾಗಿದೆ.ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈ ಯಲ್ಲಿ ಆದಿ ಮಾಯೆ ಪರಾಶಕ್ತಿ ಧೂಮಾವತಿ ಮತ್ತು ಮಾತೆ ದೇಯಿ ಬೈದೆತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ. ವಿದೇಶದ
ದುಬೈ : ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ “ದುಬೈ ಗಡಿನಾಡ ಉತ್ಸವ-2023″ಕಾರ್ಯಕ್ರಮ ನಡೆಯಲಿದೆ. ಆಮಂತ್ರಣ ಪತ್ರಿಕಾ ಬಿಡುಗಡೆ ಮಾಡಿದ ಕನ್ನಡ ಚಿತ್ರರಂಗದ ಹಾಸ್ಯ ನಟ ಸಂಗೀತ ನಿರ್ದೇಶಕ ಸಾದುಕೋಕಿಲರವರು ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳನ್ನು ಉಳಿಸುವಲ್ಲಿ ಗಡಿನಾಡಿನ ಕನ್ನಡಿಗರ ಪಾತ್ರ ಬಹಳ ದೊಡ್ಡದು. ಅದರಲ್ಲಿ ಅನಿವಾಸಿ ಕನ್ನಡಿಗರ ಪಾತ್ರಕ್ಕೆ ನನ್ನ
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಪ್ರಾಯೋಜಕತ್ವದಲ್ಲಿ, “ಮಕ್ಕಳಿಗೆ ತಾಯ್ನಾಡಿನ ಪರಂಪರೆ-ಕಲೆ- ಸಂಸ್ಕೃತಿ-ಹಬ್ಬ-ಆಚರಣೆಗಳ ಪರಿಚಯ ಯೋಜನೆಯಡಿಯಲ್ಲಿ ” ಕಳೆದ ಕೆಲ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವಂತೆ, ಮತ್ತಷ್ಟು ವೈಭವ-ಸಡಗರ ಮತ್ತು ನವರೂಪದಿಂದ ಈ ಸಲವೂ, ಸಾರ್ವಜಿನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ -2023 ಆಚರಣೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಿನಾಂಕ 10-09-2023 ನೇ ಆದಿತ್ಯವಾರದಂದು, ದುಬಾಯಿ -ಗೀಸೈಸ್ ನ ಮದಿನ ಹೈಪರ್
ಕನ್ನಡ ಮಿತ್ರರು ಯು.ಎ .ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈನ 9ನೇ ವರ್ಷದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಹಾಪೋಷಕರಾದ ಶ್ರೀ.ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಮೋಹನ್ ನರಸಿಂಹಮೂರ್ತಿ ಅವರು ಫಾರ್ಚುನ್ ಎಟ್ರಿಯಂ ಹೋಟೆಲಿನಲ್ಲಿ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಸಿದ್ದಲಿಂಗೇಶ್, ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಜಂಟಿ ಕಾರ್ಯದರ್ಶಿ ಶಿವಶರಣಪ್ಪ ಮೇಟಿ, ಖಜಾಂಜಿ ನಾಗರಾಜ್ ರಾವ್ ಉಡುಪಿ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ವಿಜಯ್ ಕುಮಾರ್,
ಕನ್ನಡ ಮಿತ್ರರು ಯು ಎ ಯಿ ದುಬೈನಲ್ಲಿ ನಡಸುತ್ತಿರುವ ಕನ್ನಡ ಪಾಠ ಶಾಲೆ ದುಬೈನ ಮಹಾ ಪೋಷಕರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಶ್ರೀಯುತ ಶಶಿಧರ್ ನಾಗರಾಜಪ್ಪ, ಉಪಾದ್ಯಕ್ಷ ಶ್ರೀಯುತ ಸಿದ್ದಲಿಂಗೇಶ್, ಕಾರ್ಯದರ್ಶಿ ಶ್ರೀಯುತ ಗವಸ್ಕರ್, ಖಜಾಂಚಿ ನಾಗರಾಜ್ ರಾವ್ ಸಂಸ್ಥಾಪಕ ಸದಸ್ಯ, ಚಂದ್ರಶೇಖರ್ ಸಂಕೋಲೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಜೋಷಿ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ
ದುಬೈ : ದುಬೈನಲ್ಲಿ “ಪಿಲಿ” ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನವು ಓವರ್ಸೀಸ್ ಮೂವೀಸ್ ಗಲ್ಫ್ ಸಹಯೋಗದಲ್ಲಿ ಪ್ರದರ್ಶನಗೊಂಡಿತು. ದುಬೈ ದೇರಾದ ಹಯಾತ್‍ನಲ್ಲಿರುವ ಗ್ಯಾಲರಿಯ ಸಿನಿಮಾ ಮಂದಿರದಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿತು. ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ, ಭಾರತದ ಕಬಡ್ಡಿ ತಂಡದ ಆಟಗಾರ ಪ್ರಶಾಂತ್ ರೈ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಕುಮಾರ್ , ಹರೀಶ್
ಯುಎಇ ಯ ಗಮ್ಮತ್ ಕಲಾವಿದೆರ್ ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟಟೈನ್ಮೆಂಟ್ ಸಹಯೋಗದಲ್ಲಿ ಹವ್ಯಾಸಿ ತುಳು ರಂಗ ನಾಟಕ ತಂಡವು ಪ್ರಸಿದ್ಧ ಬರಹಗಾರ, ಚಲನಚಿತ್ರ ಮತ್ತು ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಖ್ಯಾತ ಸಾಹಿತಿಗಳು ಬರೆದ ತುಳು ಹಾಸ್ಯ ಮತ್ತು ಸಾಮಾಜಿಕ ನಾಟಕ ‘ಕುಟುಂಬ’ ಪ್ರದರ್ಶನ ಕಂಡಿತು. ಪ್ರೆಶಿಯಸ್ ಪಾರ್ಟಿಸ್ ಮತ್ತು ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ಯಶಸ್ವಿಯಾಗಿ ಕುಟುಂಬ ನಾಟಕವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ