Home Posts tagged #kerala

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು

ಉಳ್ಳಾಲ: ಮಾದಕ ವಸ್ತು ಕೋಕೆನ್ ಪತ್ತೆ ಇಬ್ಬರು ಆರೋಪಿಗಳ ಸೆರೆ

ಉಳ್ಳಾಲ: ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ತಂಡ 35 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಂಡಿದ್ದಾರೆ‌. ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ

ಕಾಸರಗೋಡು: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ   ಫೆಬ್ರವರಿ 16 ರಿಂದ 29 ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ನಡೆಯಿತು. ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿ, ಆಮಂತ್ರಣ ಪತ್ರಿಕೆ

ಕೇರಳ ಮುಖ್ಯಮಂತ್ರಿಯಿಂದ ಹಲ್ಲೆಗೆ ಸಂಚು:ರಾಜ್ಯಪಾಲ ಆರಿಫ್ ಮೊಹಮದ್ ಖಾನ್

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನನ್ನ ಮೇಲೆ ಹಲ್ಲೆಗೆ ಸಂಚು ನಡೆಸಿದ್ದಾರೆ ಎಂದು ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಆರೋಪ ಮಾಡಿದ್ದಾರೆ. ದಿಲ್ಲಿಗೆ ಹೊರಟಿದ್ದ ರಾಜ್ಯಪಾಲರನ್ನು ವಿಮಾನ ನಿಲ್ದಾಣದ ಬಳಿ ತಡೆದ ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‍ಎಫ್‍ಐನವರು ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕೂಡಲೆ ರಾಜ್ಯಪಾಲ ಆರಿಫ್ ಖಾನ್ ಅವರು ಸ್ಥಳಕ್ಕೆ ಬಂದ ಮಾಧ್ಯಮದವರಿಗೆ ನೀಡಿದ ಮಾಹಿತಿ ಇದು. ಮುಖ್ಯಮಂತ್ರಿ ಪಿಣರಾಯಿ

ಮಂಜೇಶ್ವರ: ನವ ಕೇರಳ ಯಾತ್ರೆಗೆ ಸಿಎಂ ಪಿಣರಾಯಿ ವಿಜಯನ್ ಚಾಲನೆ

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೈವಳಿಕೆಗೆ ಆಗಮಿಸಿದ್ದ ನವ ಕೇರಳ ಯಾತ್ರೆಗೆ ಕೇರಳದ ಸಿಎಂ ಪಿಣರಾಯಿ ವಿಜಯ್ ಅವರು ಚಾಲನೆ ನೀಡಿದರು. ರಾಜ್ಯ ಸರಕಾರದ ಅಭಿವೃದ್ದಿಯನ್ನು ಕೊಂಡಾಡಿದ ಮುಖ್ಯಮಂತ್ರಿಯವರು ಕೇಂದ್ರ ಸರಕಾರವನ್ನು ಹಾಗೂ ಯುಡಿಎಫ್‍ನ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಅವರ ವಿರುದ್ಧ ಗಟ್ಟಿಯಾದ ಧ್ವನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲೂ ರಾಜ್ಯ ಸರಕಾರ ಜಾರಿಗೆ ತಂದ ಯೋಜನೆಗಳು ಹಾಗೂ

ಕೇರಳ: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆ

ಇತಿಹಾಸ ಪ್ರಸಿದ್ಧ ಕೇರಳದ ಅನಂತಪುರ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾದ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಭಕ್ತಾದಿಗಳ ಆಸೆಯಂತೆ ಅನಂತಪುರ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಕಾಣ ಸಿಕ್ಕಿದೆ. ಒಂದು ವಾರದ ಹಿಂದೆ ಭಕ್ತಾದಿಯೊಬ್ಬರು ಮೊಸಳೆ ಕಂಡಂತೆ ಆಯಿತು ಅಂದರೂ ಸಾಕ್ಷ್ಯಾಧಾರ ಇಲ್ಲದಿದ್ದರಿಂದ

ಮಂಜೇಶ್ವರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್‍ಆರ್ ಇಜಿ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ಕ್ರಮವನ್ನು ಕೊನೆಗೊಳಿಸಿ, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಿ, ಕಡಿತಗೊಳಿಸಿದ ಲೇಬರ್ ಬಜೆಟ್ ಪುನಸ್ತಾಪಿಸಿ ಇತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‍ಆರ್‍ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನೆ ನಡೆಸಿದರು. ಸಭೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಏ. ಕರೀಂ ಉದ್ಘಾಟಿಸಿದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ

ಮಂಜೇಶ್ವರ: ಬಿ ಸ್ಮಾರ್ಟ್ ಲೀಡರ್ಸ್ ಅಕಾಡೆಮಿ ಸಮ್ಮಿಲನ

ಮಂಜೇಶ್ವರ : ಮಂಜೇಶ್ವರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‍ನ ಆಶ್ರಯದಲ್ಲಿ ಬಿ ಸ್ಮಾರ್ಟ್ ಲೀಡರ್ಸ್ ಅಕಾಡೆಮಿ ಸಮ್ಮಿಲನ ಮಚ್ಚಂಪ್ಪಾಡಿ ಮದ್ರಸದಲ್ಲಿ ನಡೆಯಿತು. ಪಿ. ಎಚ್.ಅಬ್ದುಲ್ ಹಮೀದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಅಬ್ದುಲ್ ಬಾಸಿತ್ ಹುದವಿ ಪ್ರಾರ್ಥನೆಗೈದರು. ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯ ಅಬ್ದುಲ್ ಮಜೀದ್ ದಾರಿಮಿ ಪಯ್ಯಕ್ಕಿ ಸಭೆಯನ್ನು ಉದ್ಘಾಟಿಸಿದರು. ಅಬ್ದುಲ್ ಅಝೀಝ್ ಹಾಜಿ ಮಚ್ಚಂಪಾಡಿ

ಶಿಥಿಲಾವಸ್ಥೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕದ ಕೊಂಡಿ

ಪುತ್ತೂರು; ಎರಡು ಪ್ರಬಲ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಕಿರುಸೇತುವೆಯೊಂದು ಯಾರೂ ಕೇಳುವವರಿಲ್ಲದೆ ಅನಾಥಪ್ರಜ್ಞೆಯಿಂದ ಶಿಥಿಲಗೊಂಡು ಬಳಲುತ್ತಿದೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಲಾಡ್ಯವಾಗಿರುವ ಈ ರಾಜ್ಯಗಳ ನಡುವೆ ಈ ಕಿರುಸೇತುವೆಗೆ ಕಾಯಕಲ್ಪವಾಗದೆ ಇಲ್ಲಿ ಸಂಚರಿಸುವ ವಾಹನಗಳಿಗೆ ಮಾರಕ ಪ್ರದೇಶವಾಗಿ ಮಾರ್ಪಟ್ಟಿದೆ. ಸುಮಾರು 42 ವರ್ಷಗಳ ಹಿಂದೆ ನಿರ್ಮಿತವಾಗಿರುವ ಕಿರುಸೇತುವೆಯ ಅನಾಥ ಸ್ಥಿತಿ ಎರಡೂ ರಾಜ್ಯಗಳಿಗೆ ಅರ್ಥವಾಗಿಲ್ಲ. ಎರಡೂ ರಾಜ್ಯಗಳಿಗೆ ಆದಾಯ

ಉಪ್ಪಳ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಆಹಾರ ಸಾಮಾಗ್ರಿ ವಿತರಣೆ

ಮಂಜೇಶ್ವರ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 57ನೇ ಸೇವಾ ಕಾರ್ಯದ ವತಿಯಿಂದ ಉಪ್ಪಳ ಸಮೀಪದ ಪೈವಳಿಕೆ ಲಾಲ್ಬಾಗ್ ಬೋಳಂಗಳ ನಿವಾಸಿ ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಲ್ಯಾಣಿ ಕೃಷ್ಣ ದಂಪತಿಗಳ ಮನೆಯು ಶೋಚನಿಯಾವಸ್ಥೆಯಲ್ಲಿದ್ದು, ಅಲ್ಲದೇ ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ. ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ ಮೂರು