ಕೇರಳ: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆ
- ಇತಿಹಾಸ ಪ್ರಸಿದ್ಧ ಕೇರಳದ ಅನಂತಪುರ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾದ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು.
ಇದೀಗ ಭಕ್ತಾದಿಗಳ ಆಸೆಯಂತೆ ಅನಂತಪುರ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಕಾಣ ಸಿಕ್ಕಿದೆ. ಒಂದು ವಾರದ ಹಿಂದೆ ಭಕ್ತಾದಿಯೊಬ್ಬರು ಮೊಸಳೆ ಕಂಡಂತೆ ಆಯಿತು ಅಂದರೂ ಸಾಕ್ಷ್ಯಾಧಾರ ಇಲ್ಲದಿದ್ದರಿಂದ ನಂಬಲು ಅಸಾಧ್ಯವಾಗಿತ್ತು. ಇದೀಗ ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ. ದೇವರ ಪ್ರತಿಬಿಂಬ ಎಂದೇ ಹೇಳಲ್ಪಡುತ್ತಿರುವ ಮೊಸಳೆ ಈಗ ಕಾಣಿಸುತ್ತಿರುವುದು ಭಕ್ತಾದಿಗಳಲ್ಲಿ ಖುಷಿ ತಂದಿದೆ. ದೇವರ ಪವಾಡವೋ, ಕಾರಣಿಕ ಶಕ್ತಿಯೋ ಎಂಬಂತೆ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದ್ದು ಕ್ಷೇತ್ರಕ್ಕೆ ಮತ್ತಷ್ಟು ಆಸ್ತಿಕರನ್ನು ಆಹ್ವಾನಿಸಲಿದೆ.