ಕಿನ್ನಿಗೋಳಿ : ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಮತಗೆ ಬೇಕಾಗಿದೆ ದಾನಿಗಳ ನೆರವು
ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ ದನಂಜಯ ದೇವಾಡಿಗ ಅವರ ಪತ್ನಿ ಮಮತ ಅವರು ಕಳೆದ ಕೆಲ ತಿಂಗಳಿಂದ ಮೈಲೋಯ್ಡ್ ಲ್ಯುಕೇಮಿಯಾ ಕಾಯಿಲೆಯಿಂದ ಬಲಳುತ್ತಿದ್ದಾರೆ. ಮುಂಬೈಯಲ್ಲಿ ಬದುಕು ಸಾಗಿಸುತ್ತಿರುವ ಇವರು ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುವಂತಾಗಿದೆ. ಮುಂಬೈಯ ಅಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಗಾಗಿ ತನ್ನಲ್ಲಿರುವ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಇದುವರೆಗೆ ಸುಮಾರು 65 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ದಾನಿಗಳ, ಮಹರಾಷ್ಟ್ರ ಸರಕಾರ ಅಲ್ಲದೆ ತನ್ನಲ್ಲಿರುವ ಚಿಕ್ಕ ಪುಟ್ಟ ಆಸ್ತಿಗಳನ್ನು ಮಾರಿ ಚಿಕಿತ್ಸೆಗೆ ನೀಡಿದ್ದಾರೆ. 6 ವರ್ಷ ಪ್ರಾಯದ ಚಿಕ್ಕ ಮಗು ಇದ್ದು ದನಂಜಯ ದೇವಾಡಿಗ ಒಬ್ಬರೇ ದುಡಿಯುವವರಾಗಿದ್ದು, ಇವರಿಗೆ ದಿಕ್ಕೇ ತೋಚದಂತಾಗಿದೆ.
ಇದೀಗ ಎರಡನೇ ಅಸ್ಥಿಮಜ್ಜೆಯ ಕಸಿ ಮತ್ತು ಕೀಮೋಥೆರಪಿಗೆ ಯೋಚಿಸಲಾಗಿದ್ದು ಮತ್ತೆ ಆಕೆಯ ಚಿಕಿತ್ಸೆಗೆ ಅಂದಾಜು 35 ಲಕ್ಷ ರೂ ತಗಲುತ್ತದೆ ಎಂದು ವೈದ್ಯರು ತಿಳಿಸಿದ್ದು, ದನಂಜಯ ದೇವಾಡಿಗ ಅವರಿಗೆ ಬರಸಿಡಿಲು ಬಡಿದಂತಾಗಿದೆ. ಈ ವೆಚ್ಚ ಭರಿಸಲು ಸಾಧ್ಯವಾಗದ ಇವರು ಇದೀಗ ದಾನಿಗಳ ಬಳಿ ಅಂಗಲಾಚುತ್ತಿದ್ದಾರೆ. ಪ್ರತೀ ದಿನ ಅನಗತ್ಯ ವಿಷಯಗಳಿಗೆ ಖರ್ಚು, ಅನಗತ್ಯ ವಿಷಯದ ಬಗೆಗಿನ ಚರ್ಚೆ ನಡೆಸುವ ನಾವುಗಳು ಒಂದು ಚಿಕ್ಕ ಮೊತ್ತವನ್ನು ಇವರಿಗೆ ನೀಡಿ ಒಂದು ಬಡ ಜೀವದ ಚಿಕಿತ್ಸೆಗೆ ಅಗತ್ಯವಾಗಿ ನೆರವಾಗಬೇಕಾಗಿದೆ.
ಬ್ಯಾಂಕ್ ವಿವರಗಳು:
ಖಾತೆಯ ಹೆಸರು: ಮಮತಾ ದೇವಾಡಿಗ
ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಬರೋಡಾ
A.C No : 70010100008276
IFSC: BARB0VILWES
ವಿಲೆಪಾರ್ಲೆ ಪಶ್ಚಿಮ ಮುಂಬೈ
Google Pay 8879689840
ಮಮತಾ ದೇವಾಡಿಗ.
UPI ID:devadiga27mamata@okicici.
ಸಂಪರ್ಕ ವಿವರಗಳು:
ಸುಮಿತ್ (ಸಹೋದರ) 8779562541
ಚಂದ್ರಹಾಸ್ (ಭಾವ) :9833649976