ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಬೆಂಗಳೂರಿನ ಜೆಪಿ ನಗರದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಗೋಲ್ಡ್ ಮೆಡಲ್ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮೇರಿ ಗೋ ರೌಂಡ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್‌ನ 50ನೇ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ
ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಚಲಿಸುತ್ತಿರುವ ಲಾರಿಯಿಂದ ಜಿಗಿದು ನಿರ್ವಾಹಕ ಸಾವನ್ನಪ್ಪಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಲಕ್ಷ್ಮಣನ್ ಸೆಂಗುತ್ತುವನ್(46) ಚಿನ್ನತೂಬುರ್ ನಾಗಪಟ್ಟಿನಮ್, ತಮಿಳುನಾಡಿನ ವ್ಯಕ್ತಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿಯು ಗುಂಡ್ಯ ಸಮೀಪದ ಅಡ್ಡಹೊಳೆ ತಲುಪುತಿದ್ದಂತೆ ಏಕಾಏಕಿಯಾಗಿ
ಉಡುಪಿ ಟಿಪ್ಪರ್ ಲಾರಿ ಪಲ್ಟಿಯಾಗಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಗಣಪಣಕಟ್ಟೆ ತಿರುವಿನ ಬಳಿ ಮಂಗಳವಾರ (ಫೆ.25ರಂದು) ಮುಂಜಾನೆ ನಡೆದಿದೆ.ಮೃತರನ್ನು ಬೈಂದೂರಿನ ಸುಬ್ರಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ ಸುಮಾರಿಗೆ ಈ ಘಟನೆ ನಡೆದಿದೆ. 4 ಗಂಟೆಯ ಟಿಪ್ಪರ್ ಬೈಂದೂರಿನಿಂದ ಪಳ್ಳಿಯ ಕೋರೆಗೆ ಜಲ್ಲಿ ತರಲು ಹೋಗುತ್ತಿದ್ದ ವೇಳೆ ಪಲ್ಟಿಯಾಗಿದೆ. ಪರಿಣಾಮ ಚಾಲಕ ಸುಬ್ರಮಣ್ಯ
ಅಂಚೆ ಕಚೇರಿಗಳು ಜನ ಸಾಮಾನ್ಯರ ಜೀವನಕ್ಕೆ ಅವಶ್ಯವಾದಂತಹ ಸೇವೆಗಳನ್ನು ಮನೆಬಾಗಿಲಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ನೀಡುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಮತ್ತು ಬದಲಾದ ಕಾಲ ಘಟ್ಟದಲ್ಲಿ ಅಂಚೆ ಇಲಾಖೆಯ ಜನಸೇವೆ ಅತ್ಯಂತ ಶ್ಲಾಘನೀಯ ಎಂದು ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು. ಕೋಟೆಕಾರಿನ ಮಾಡೂರಿನಲ್ಲಿ ಹೊಸ ಶಾಖಾ ಅಂಚೆ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಹೊಸ ಶಾಖಾ
ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ಫೆ. 22ನೇ ಶನಿವಾರದಿಂದ ಫೆ. 28 ಶುಕ್ರವಾರದವರೆಗೆ ಮಂಡೆಕೋಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನದಲ್ಲಿ ನಡೆಯುತ್ತಿದ್ದು ಈ ಶಿಬಿರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ| ರುದ್ರಕುಮಾರ್ ಎಂ. ಎಂ.,
ಕಳೆದ 16 ವರುಷಗಳಿಂದ ಹದೆಗೆಟ್ಟಿರುವ ಬೆಳ್ಳಾರೆ ಗ್ರಾಮದ ಬೀಡು-ಪಾಟಾಜೆ ರಸ್ತೆ ಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ನಮ್ಮ ಬೀಡು, ಪಾಟಾಜೆ ರಸ್ತೆ ದುರಸ್ತಿಗೊಳಿಸುವ ಭರವಸೆಯನ್ನು ಸರಕಾರ ಹಾಗೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕೊಡದೇ ಹೋದಲ್ಲಿ ಇಲ್ಲಿನ ಎಲ್ಲಾ ನಿವಾಸಿಗಳು ರಸ್ತೆಗೆ ಇಳಿದು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ
ಸುಖ ಯಾವುದನ್ನು ಸೃಷ್ಟಿಸುವುದಿಲ್ಲ ಸತತ ಪರಿಶ್ರಮದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಹಳ್ಳಿಯ ಬೇರುಗಳು ಸಾಹಿತ್ಯವನ್ನು ಸೃಷ್ಟಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘವು ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಹಮ್ಮಿಕೊಂಡ “ಬರವಣಿಗೆ ಮಾಧ್ಯಮ ಶಿಬಿರ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ
ಮಂಗಳೂರು : ಶಕ್ತಿನಗರದ ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಶನಿವಾರ ನಡೆಯಿತು. ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ .ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ರಂಗಕರ್ಮಿ ಜಿ.ಎಸ್.ಆಚಾರ್ ರವರಿಗೆ ಹಾಸ್ಯ ಚಕ್ರವರ್ತಿ ಬಿರುದಾಂಕಿತ ದಿ| ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ
ಉಡುಪಿ:-ಮಣೂರು ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲಿ ಕಿಡಿಗೇಡಿಗಳು ಮೂಟೆ ಗಟ್ಟಲೆ ತ್ಯಾಜ್ಯ ಎಸೆದು ಹೋಗುತ್ತಿರುವ ಘಟನೆ ಕಳೆದ ಎರಡು ದಿನಗಳಿಂದ ಸತತವಾಗಿ ನಡೆಯುತ್ತಿದೆ. ಸೋಮವಾರ ರಾತ್ರಿ ಬೆಳಗಾಗುವದರೊಳಗೆ ಒಂದು ಬಾರಿ ಗಾತ್ರದ ತ್ಯಾಜ್ಯದ ಚೀಲ ಕಾಣಿಸಿಕೊಂಡಿತ್ತು. ನಂತರ ಮಂಗಳವಾರ ಮುಂಜಾನೆಯೊಳಗೆ ಮತ್ತೆ ಮೂರು ಬಾರಿ ಗಾತ್ರದ ತ್ಯಾಜ್ಯದ ಚೀಲ ಅದೇ ಡಿವೈಡರ್ ಮಧ್ಯದಲ್ಲಿ ಕಿಡಿ ಗೇಡಿಗಳು ಎಸೆದು ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿಯ ವಿಶೇಷ ಸಭೆ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಅಧ್ಯಕ್ಷತೆಯಲ್ಲಿ ಫೆ.18ರಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆಯಿತು. ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಎಪ್ರಿಲ್ 5ರಂದು ಶನಿವಾರ ಸಂಜೆ ಉಡುಪಿಯ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ತಾಲೂಕು ಸಂಘದವರೊಂದಿಗೆ ಸೇರಿ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಬಗ್ಗೆ




























