Home Posts tagged #mangalore (Page 250)

ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಳೆದ ಸುಮಾರು ವರ್ಷಗಳಿಂದ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರು ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಇದರ ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ, ಪಡೀಲ್ ಡಿಸ್ಟ್ರಿಕ್ಟ್ 317ಡಿ ಇದರ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಅಧ್ಯಕ್ಷರಾಗಿ

ಮಂಗಳೂರಿನ ಎಸ್‌ ಸಿಡಿಸಿಸಿ ಬ್ಯಾಂಕ್‌ ನಿಂದ ರೈತಸ್ಪಂದನ ಕಾರ್ಯಕ್ರಮ:ವಿವಿಧ ಕೃಷಿ ಸಾಲ ವಿತರಣೆ

ಮಂಗಳೂರು: ರಾಜ್ಯದ ಕೋವಿಡ್ ಸಂತ್ರಸ್ತರ ಕುಟುಂಬದ 81ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.  ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡ ’ರೈತ ಸ್ಪಂದನ’ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಕೃಷಿಕರಿಗೆ ವಿವಿಧ ರೀತಿಯ ಸಾಲ ವಿತರಿಸಿದರು. ಬಳಿಕ ಮಾತನಾಡಿದ್ರು, ಕೋವಿಡ್ ಸಂತ್ರಸ್ತ

ನಮ್ಮಲ್ಲಿ ಯಾವುದೇ ಬಣವಿಲ್ಲ, ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯ:ಮಂಗಳೂರಲ್ಲಿ ರಕ್ಷಾ ರಾಮಯ್ಯ

ನಮ್ಮಲ್ಲಿ ಯಾವುದೇ ಬಣವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದೇ ನಮ್ಮ ಧ್ಯೇಯವಾಗಿದೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ತಾನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದೆ. ಇದೀಗ ಹೈಕಮಾಂಡ್ ಅಧ್ಯಕ್ಷ ಸ್ಥಾನವನ್ನು ಮುಹಮ್ಮದ್ ನಲಪಾಡ್‌ಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಅದರಂತೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಹೇಳಿದ್ದಾರೆ. ಮಂಗಳೂರಿನ ಕಾಂಗ್ರೆಸ್

ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಇಂಟಕ್ ಆಗ್ರಹ

ಕರಾವಳಿಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಮತ್ತು ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ ಎಂದು ಇಂಟಕ್  ನ ರಾಜ್ಯ ಕಾರ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ ಆಗ್ರಹಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕರಾವಳಿಯಲ್ಲಿ ಕೈಗಾರಿಕಾ ಪ್ರಾಂಗಣ ನಿರ್ಮಿಸಲು ಭೂಸ್ವಾಧೀನ, ಕೈಗಾರಿಕೆ ನಿರ್ಮಾಣದ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇದುವರೆಗೆ  ಎಚ್‌ಪಿಸಿಎಲ್,

ಜುಲೈ 14ರಂದು ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರಾ’ದ ಅಂಗವಾಗಿ ದ.ಕ. ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಮಂಗಳೂರಿನ ಟೀಂ ಬಿ-ಹ್ಯೂಮನ್ ಸಂಸ್ಥೆ ಆಯೋಜಿಸಿದೆ. ಜುಲೈ 14ರಂದು ಬೆಳಿಗ್ಗೆ 10.00ಕ್ಕೆ ಝೂಮ್ (ಮೀಟಿಂಗ್ ಐಡಿ: 85029107730 ಪಾಸ್ಕೋಡ್: 687283) ಮೂಲಕ

ಮಂಗಳೂರಿನಲ್ಲಿ ಪ್ರಸ್ತಾವಿತ ಸೈಕಲ್ ಪಥ ಅವೈಜ್ಞಾನಿಕ : ಎ.ಸಿ. ವಿನಯರಾಜ್ 

ಬೆಂಗಳೂರು ಮಾದರಿಯಲ್ಲಿ ಮಂಗಳೂರಿನಲ್ಲಿ ಸೈಕಲ್ ಪಥ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಂಗಳೂರಿನಲ್ಲಿ ಪ್ರಸ್ತಾವಿತ ಸೈಕಲ್ ಪಥವು ಅವೈಜ್ಞಾನಿಕವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ವಿಪಕ್ಷ ನಾಯಕ ಎ.ಸಿ. ವಿನಯರಾಜ್ ಎಚ್ಚರಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ಎರಡು ಹಂತದಲ್ಲಿ ನಿರ್ಮಿಸಲು

ಬೆಲೆಯೇರಿಕೆಯ ವಿರುದ್ಧ ಮಂಗಳೂರಿನಲ್ಲಿ ವಿಸ್ತಾರಗೊಳ್ಳುತ್ತಿರುವ ಚಳುವಳಿ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ವಿಪರೀತವಾಗಿ ಹೆಚ್ಚಿದ್ದು,ಅದರ ಜೊತೆಗೆ ವಿದ್ಯುತ್ ದರವನ್ನು ಕೂಡ ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟನ್ನು ನೀಡಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು,ಇಂದು ಕುಲಶೇಖರ ಹಾಗೂ ಜಪ್ಪಿನಮೊಗರುನಲ್ಲಿ ಪ್ರತಿಭಟನೆ ನಡೆಯಿತು.

ಡಿಕೆಶಿ ಕಪಾಳಮೋಕ್ಷ ವಿಚಾರ: ಮಂಗಳೂರಿನಲ್ಲಿ ನಳಿನ್ ಕುಮಾರ್ ಪ್ರತಿಕ್ರಿಯೆ

ಮಂಗಳೂರು: ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು, ಯಾರ ಬಗ್ಗೆಯೂ ವೈಯಕ್ತಿಯವಾಗಿ ಮಾತನಾಡಲ್ಲ, ಆದ್ರೆ ಸಮಾಜ ನಮ್ಮನ್ನ ಗಮನಿಸುತ್ತಿರುತ್ತದೆ. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ. ಅವರು ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರೋದು

ಮಂಗಳೂರು-ಯಶವಂತಪುರ ಹಗಲು ರೈಲು ’ವಿಸ್ಟಾಡೋಮ್’ ಗೆ ಚಾಲನೆ

ಮಂಗಳೂರು-ಯಶವಂತಪುರ ನಡುವೆ ಹಗಲು ಸಂಚರಿಸುವ ಆಕರ್ಷಕ ರೈಲು ’ವಿಸ್ಟಾಡೋಮ್’ ಗೆ ಇಂದು ಮಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲ್ವೆ ಇಲಾಖೆಯು ಹೆಚ್ಚು ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಯತ್ನ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ ನೊಳಗೆ ಸಿಲುಕಿಕೊಂಡ ಮೂವರ ರಕ್ಷಣೆ

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್‌ನಲ್ಲಿ ತೆರಳಿದ್ದರು. ಲಿಫ್ಟ್ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು. ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಯಾಗಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ