Home Posts tagged #mangalore (Page 251)

ಮಂಗಳೂರಿನಲ್ಲಿ ಪ್ರಸ್ತಾವಿತ ಸೈಕಲ್ ಪಥ ಅವೈಜ್ಞಾನಿಕ : ಎ.ಸಿ. ವಿನಯರಾಜ್ 

ಬೆಂಗಳೂರು ಮಾದರಿಯಲ್ಲಿ ಮಂಗಳೂರಿನಲ್ಲಿ ಸೈಕಲ್ ಪಥ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಂಗಳೂರಿನಲ್ಲಿ ಪ್ರಸ್ತಾವಿತ ಸೈಕಲ್ ಪಥವು ಅವೈಜ್ಞಾನಿಕವಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ವಿಪಕ್ಷ ನಾಯಕ ಎ.ಸಿ. ವಿನಯರಾಜ್ ಎಚ್ಚರಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ

ಬೆಲೆಯೇರಿಕೆಯ ವಿರುದ್ಧ ಮಂಗಳೂರಿನಲ್ಲಿ ವಿಸ್ತಾರಗೊಳ್ಳುತ್ತಿರುವ ಚಳುವಳಿ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ವಿಪರೀತವಾಗಿ ಹೆಚ್ಚಿದ್ದು,ಅದರ ಜೊತೆಗೆ ವಿದ್ಯುತ್ ದರವನ್ನು ಕೂಡ ಹೆಚ್ಚಿಸಿ ಜನಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟನ್ನು ನೀಡಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು,ಇಂದು ಕುಲಶೇಖರ ಹಾಗೂ ಜಪ್ಪಿನಮೊಗರುನಲ್ಲಿ ಪ್ರತಿಭಟನೆ ನಡೆಯಿತು.

ಡಿಕೆಶಿ ಕಪಾಳಮೋಕ್ಷ ವಿಚಾರ: ಮಂಗಳೂರಿನಲ್ಲಿ ನಳಿನ್ ಕುಮಾರ್ ಪ್ರತಿಕ್ರಿಯೆ

ಮಂಗಳೂರು: ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ವಿಚಾರಕ್ಕೆ ಸಂಬಂಧಿಸಿ ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು, ಯಾರ ಬಗ್ಗೆಯೂ ವೈಯಕ್ತಿಯವಾಗಿ ಮಾತನಾಡಲ್ಲ, ಆದ್ರೆ ಸಮಾಜ ನಮ್ಮನ್ನ ಗಮನಿಸುತ್ತಿರುತ್ತದೆ. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ. ಅವರು ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರೋದು

ಮಂಗಳೂರು-ಯಶವಂತಪುರ ಹಗಲು ರೈಲು ’ವಿಸ್ಟಾಡೋಮ್’ ಗೆ ಚಾಲನೆ

ಮಂಗಳೂರು-ಯಶವಂತಪುರ ನಡುವೆ ಹಗಲು ಸಂಚರಿಸುವ ಆಕರ್ಷಕ ರೈಲು ’ವಿಸ್ಟಾಡೋಮ್’ ಗೆ ಇಂದು ಮಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲ್ವೆ ಇಲಾಖೆಯು ಹೆಚ್ಚು ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಯತ್ನ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ ನೊಳಗೆ ಸಿಲುಕಿಕೊಂಡ ಮೂವರ ರಕ್ಷಣೆ

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್‌ನಲ್ಲಿ ತೆರಳಿದ್ದರು. ಲಿಫ್ಟ್ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು. ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಯಾಗಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ

ಸಹಕಾರ ಸಚಿವಾಲಯ ಸ್ಥಾಪಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ: ಎಸ್.ಆರ್. ಸತೀಶ್ಚಂದ್ರ

ಸುಮಾರು 117 ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರಕ್ಕೆ ಸಹಕಾರ ಸಚಿವಾಲಯ ಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕರ ಪರಿಗಣಿಸಿ ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರ್ಕಾರಕ್ಕೆ ಸಹಕಾರಿಗಳ ಪರವಾಗಿ ಧನ್ಯವಾದವನ್ನು ತಿಳಿಸುತ್ತೇನೆ ಎಂದು ಸಹಕಾರ ಭಾರತಿಯ ಕರ್ನಾಟಕದ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು. ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿ ನಮ್ಮ

ಪಚ್ಚನಾಡಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಭೇಟಿ, ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಕಾರ್ಯಪಾಲಕ ಅಭಿಯಂತರ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯೆ ನೀಡಿ,

ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರ- ಸುನೀಲ್‌ ಕುಮಾರ್ ಬಜಾಲ್

ಲಾಕ್ಡೌನ್ ಅವಧಿಯಲ್ಲಿ ಜನಸಾಮಾನ್ಯರಿಗೆ ಉದ್ಯೋಗವಿಲ್ಲದೆ , ವ್ಯಾಪಾರವಿಲ್ಲದೆ ಬದುಕು ನಡೆಸಲು ಅಸಾಧ್ಯವಾಗದಂತಹ ಪರಿಸ್ಥಿಯಲ್ಲಿರುವಾಗ ನಮ್ಮನ್ನಾಳುವ ಕೇಂದ್ರ ಸರಕಾರ ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಸಹಿತ, ಗೃಹ ಉಪಯೋಗಿ ವಸ್ತಗಳ ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರಗೊಂಡಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಅವರು ಪೆಟ್ರೋಲ್, ಡೀಸಲ್, ಗ್ಯಾಸ್ ದರ

ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಧ್ವನಿಯಾಗಲಿದೆ: ಡಿ.ಕೆ. ಶಿವಕುಮಾರ್ 

ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಸದನದ ಒಳಗೆ ಹಾಗೂ ಹೊರಗೆ ಮೀನುಗಾರರ ಧ್ವನಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಮಂಗಳೂರು ಸುಲ್ತಾನ್‌ಬತ್ತೇರಿಯ ಬೋಳೂರಿನ ಮೊಗವೀರ ಸಮುದಾಯ ಭವನದಲ್ಲಿ ಜಿಲ್ಲಾ ಮೊಗವೀರರ ಕುಂದು ಕೊರೆತೆಗಳನ್ನು ಅಧ್ಯಯನ ಸಭೆಯಲ್ಲಿ ಮಾತನಾಡಿದರು. ಕೇರಳ, ಗೋವಾದಲ್ಲಿರುವಂತೆ ಕರ್ನಾಟಕದಲ್ಲೂ ಕರಾವಳಿಯ ತೀರದಲ್ಲಿ ಬದುಕುತ್ತಿರುವ ಮೀನುಗಾರರಿಗೆ ಅನ್ಯಾಯವಾಗಬಾರದು. ಆಂದ್ರದಲ್ಲಿ ದೊರೆಯುವಂತೆ ಡೀಸೆಲ್

ಮೀನುಗಾರರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ: ಮಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್

ದಕ್ಷಿಣ ಕನ್ನಡ ಜಿಲೆಯಲ್ಲಿ ಮೀನುಗಾರರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಮಂಗಳೂರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಕೊಟ್ಟಿದ್ದಾರೆ. ಮೀನುಗಾರರ ಸಮಸ್ಯೆಗಳನ್ನ ಆಲಿಸಿ, ಬಳಿಕ ನಗರದ ಓಶಿಯನ್ ಪರ್ಲ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿದ್ರು. ಈಗಾಗಲೇ ಮಂಗಳೂರಿನ ಮೀನುಗಾರರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ.ಪಕ್ಷದ ಕಾರ್ಯಕ್ರಮದ ಸಲುವಾಗಿ ಮಂಗಳೂರಿಗೆ ಬಂದಿಲ್ಲ. ಇನ್ನು ಮೇಕೆದಾಟು ಯೋಜನೆ ರಾಜ್ಯಕ್ಕೆ ಅತೀ ಮುಖ್ಯವಾದ ಯೋಜನೆವಾಗಿದೆ. ಈ ಹಿಂದೆ ನಾನು