Home Posts tagged #mangalore (Page 365)

ಅಡುಗೆ ಅನಿಲ ವಿತರಣೆಯಲ್ಲಿ ಅಕ್ರಮ ಆರೋಪ : ವೀಡಿಯೋ ವೈರಲ್

ಮಂಜೇಶ್ವರಂ: ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅನಂತ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಗುತ್ತಿರುವ ಅಡುಗೆ ಅನಿಲ ವಿತರಣೆಯಲ್ಲಿ ತೂಕ ಕಡಿಮೆ ಇರುವುದಾಗಿ ಆರೋಪಿಸಿ ಗ್ರಾಹಕರೊಬ್ಬರು ವೀಡಿಯೋ ಒಂದನ್ನು ವೈರಲ್ ಮಾಡಿದ ಬೆನ್ನಲ್ಲೇ ಗ್ರಾಹಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.ಆದರೆ ಏಜನ್ಸಿ ಕಚೇರಿ ಮುಂಬಾಗದಲ್ಲಿ ಇರಿಸಲಾಗಿದ್ದ ತೂಕ ಕಡಿಮೆ ಕಂಡು ಬಂದ

ಕಾರ್ಕಳ:ಕೆಲವೆಡೆ ಬೀಸಿದ ಸುಂಟರ ಗಾಳಿ, ಹಲವು ಮನೆಗಳಿಗೆ ಹಾನಿ

ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ. ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ. ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ […]

ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆ : ಬಂಟ್ವಾಳದ ಸಾತ್ವಿಕ್ ವಿನ್ನರ್

ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಜೇಸಿ ಸಪ್ತಾಹದಂಗವಾಗಿ ನಿಶ್ಮಿತಾ ಪ್ಯಾರಡೈಸ್‍ನಲ್ಲಿ ನಡೆದ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ಕರೋಕೆ ಸಂಗೀತ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಬಂಟ್ವಾಳದ ಸಾತ್ವಿಕ್ ವಿನ್ನರ್ ಆಗಿ ಮೂಡಿ ಬಂದರು. ಹೆಬ್ರಿಯ ಸಂದೀಪ್ ರನ್ನರ್ ಅಪ್ ಹಾಗೂ ಮಂಗಳೂರಿನ ಅಭಿನವ್ ಎಸ್. ಭಟ್ ತೃತೀಯ ಬಹುಮಾನ ಗಳಿಸಿದರು. ರವಿ ಮಿಜಾರು, ಮುರಾರಿ ರಾವ್ ಹೊಸಬೆಟ್ಟು ಹಾಗೂ ಅನುಷಾ ಉಡುಪಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸಂಜೆ

19ನೇ ರಾಜ್ಯಮಟ್ಟದ ಕರಾಟೆ ಕೆಲರಾಯ್ ರೆಡ್‍ಕ್ಯಾಮೆಲ್‍ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ : ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್, ಎಂಕೆ ಅನಂತರಾಜ್ ಕಾಲೇಜು ಓಫ್ ಫಿಸಿಕಲ್ ಎಜುಕೇಶನ್ ಹಾಗೂ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸೆಂಟರ್ ಜಂಟಿಯಾಗಿ ಸಮಾಜಮಂದಿರದಲ್ಲಿ ಆಯೋಜಿಸಿದ 19ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕೆಲರಾಯ ರೆಡ್ ಕ್ಯಾಮಲ್ ಇಂಗ್ಲಿಷ್ ಮೀಡಿಯಂ ಶಾಲೆಯು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿದೆ. ಅಡ್ಯಾರ್ ಕಣ್ಣೂರಿನ ಬರಕ ಇಂಟರ್ನಾಷನಲ್ ಶಾಲೆಯು ತಂಡ ರನ್ನರ್ಸ್ ಗೆದ್ದುಕೊಂಡಿದೆ. ತೃತೀಯ ಸ್ಥಾನವನ್ನು

ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ : ಗೃಹ ನಿರ್ಮಾಣಕ್ಕೆ ರೂ 15 ಲಕ್ಷ ಸಾಲ

ಮೂಡುಬಿದಿರೆ : ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ಸಿ)ಯು 2021-22ನೇ ಸಾಲಿನಲ್ಲಿ ರಲ್ಲಿ ಹದಿಮೂರು ಲಕ್ಷದ ಎರಡು ಸಾವಿರದ ಐನೂರ ಅರವತ್ತ ಒಂಭತ್ತು ರಷ್ಟು ಲಾಭಾಂಶವನ್ನು ಹೊಂದಿರುತ್ತದೆ. ಈ ಸಾಲಿನ ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ಆಡಳತ ಮಂಡಳಿ ಶಿಫಾರಸ್ಸು ಮಾಡಿದೆ ಹಾಗೂ ಈ ಹಿಂದೆ ಸಂಘದ ಸದಸ್ಯರುಗಳಿಗೆ ಮನೆ ರಿಪೇರಿಗಾಗಿ ರೂ ಲಕ್ಷವನ್ನು 5 ನೀಡುತ್ತಿತ್ತು ಇದೀಗ ಈ ವರ್ಷದಿಂದ ನಮ್ಮ ಗ್ರಾಹಕರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಮನೆ

ಟೋಲ್‍ಗೇಟ್ ಹೋರಾಟ ಸಮಿತಿಯಿಂದ ಸಾಮೂಹಿಕ ಧರಣಿ ಆರಂಭ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು. ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಕಮರಿಗೆ ಉರುಳಿದ ರಿಕ್ಷಾ : ಚಾಲಕ ಮೃತ್ಯು

ಉಳ್ಳಾಲ: ರಿಕ್ಷಾ ಕಮರಿಗೆ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಸಮೀಪದ ಪಾನೀರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ ಆನಂದ್ ಸಪಲ್ಯ (70)ಮೃತರು. ಕೋಟೆಕಾರು ರಿಕ್ಷಾ ಪಾಕ್9ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಅವರು ನಿನ್ನೆ ರಾತ್ರಿ ದೇರಳಕಟ್ಟೆ ಕಡೆಗೆ ಬಾಡಿಗೆಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಪಾನೀರು ಅಸಿಸ್ಸಿ ಶಾಲೆ ಬಳಿ ಕಮರಿಗೆ ಉರಳಿ ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ.ಮೃತರು ಪತ್ನಿ ಪುತ್ರ

ಬೈಂದೂರು ತಾಲೂಕು ಬಿಲ್ಲವರ ಸಂಘ : ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನಾಚರಣೆ

ಬೈಂದೂರು ತಾಲೂಕು ಬಿಲ್ಲವರ ಸಂಘಇವರ ನೇತ್ರತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ದಿನದಪ್ರಯುಕ್ತ ಬೃಹತ್ ಗುರು ಸಂದೇಶ ವಾಹನ ಜಾಥಾ ಇಂದು ಬೈಂದೂರು ಹೊಸ ಬಸ್ ನಿಲ್ದಾಣ ದಿಂದ ಹೊರಟು ಮರವಂತೆ ಮೈದಾನದಲ್ಲಿ ಮುಕ್ತಾಯಗೊಂಡಿತು.ಬೈಂದೂರು ತಾಲೂಕು ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ ಗೋಪಾಲ ಪೂಜಾರಿಯವರುಕಾರ್ಯಕ್ರಮವನ್ನು ಉದ್ಘಾಟಿಸಿದರು ಮಾತನಾಡಿದರು. ಎಸ್ ರಾಜು ಪೂಜಾರಿ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.ಈ

ಪಡುಮಾರ್ನಾಡು ಮಹಿಳೆಗೆ ಹಲ್ಲೆ : ಇಬ್ಬರ ಬಂಧನ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ ಕಲ್ಲೊಟ್ಟುವಿನಲ್ಲಿ ಕುಮ್ಮಿ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂದಿ ಸಿದ್ದಾರೆ. ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್ ಮತ್ತು ಅವರ ಸ್ನೇಹಿತ ಹರೀಶ್ ಹೆಗ್ಡೆ ಬಂಧಿತರು. ಪಡುಮಾರ್ನಾಡಿನಲ್ಲಿ ಕುಮ್ಮಿ ಹಕ್ಕಿಗೆ ಸಂಬಂಧಿಸಿದಂತೆ ಹರೀಶ್ ಮತ್ತು ಶಕುಂತಳ ಮಧ್ಯೆ ವ್ಯಾಜ್ಯ

ಐಎಎಸ್ ಅಧಿಕಾರಿಯಾಗಿ ಭಡ್ತಿಪಡೆದ ಸದಾಶಿವ ಪ್ರಭು : ಬಂಟಕಲ್ಲು ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನ

ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದ ಸದಾಶಿವ ಪ್ರಭುರವರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ವತಿಯಿಂದ ಅಭಿನಂದಿಸಲಾಯಿತು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಸದಾಶಿವ ಪ್ರಭುರವರು ಭಾರತ ಸರಕಾರದಿಂದ ಐಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದು, ಬೆಂಗಳೂರು ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯರಾಗಿ ಪ್ರಥಮ ಬಾರಿಗೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಶ್ರೀ ಕ್ಷೇತ್ರದ ವತಿಯಿಂದ