Home Posts tagged #mangalore (Page 53)

ಉಡುಪಿ ಪರ್ಯಾಯ ಮಹೋತ್ಸವ: ಹೊರೆಕಾಣಿಕೆ ಮೆರವಣಿಗೆ

ಭಾರತೀಯ ಪರಂಪರೆ, ಮಾಧ್ವ ತತ್ವವನ್ನು ಜಗತ್ತಿಗೆ ಸಾರಿದ ಹಾಗೂ ಗೀತಾಸಾರವನ್ನು ವಿಶ್ವಕ್ಕೆ ಪಸರಿಸಲು ಕಾರಣವಾಗಿರುವ ಉಡುಪಿ ಅಷ್ಠಮಠಗಳ ಪೈಕಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಯವರ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಹೊರೆಕಾಣಿಕೆಯನ್ನು ಮೆರವಣಿಗೆಯ

ಕಾಸರಗೋಡು: ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ

ಕಾಸರಗೋಡು ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಶ್ರೀ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ಮಂದಿರ ಪರಿಸರದಲ್ಲಿ ನಡೆಯಿತು. ವಿವಿಧ ಚರ್ಚೆಗಳ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ ಯಾದರು, ಉಪಾಧ್ಯಕ್ಷ ಶ್ರೀ ರವಿ ಕರಂದಕ್ಕಾಡ್, ಕಾರ್ಯದರ್ಶಿ ಜಿತೇಶ್ ಕರಂದಕ್ಕಾಡ್, ಜತೆ ಕಾರ್ಯದರ್ಶಿ ಹರೀಶ್ ಪ್ರತೀಕ್, ಕೋಶಾಧಿಕಾರಿ ಜೀವನ್, ಮತ್ತು ಕಾರ್ಯಕಾರಿಣಿಸಮಿತಿ ಸದಸ್ಯರಾಗಿ ಮಾಧವ, ರಾಧಾಕೃಷ್ಣ, ಗಣೇಶ್,

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಡಗನ್ನೂರುಃ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ (ರಿ.) ಶ್ರೀ ಕ್ಷೇತ್ರ ಗೆಜ್ಜೆಗಿರಿ ವರ್ಷಾವಧಿ ಜಾತ್ರೋತ್ಸವವು ಫೆ.25 ರಿಂದ 28 ತನಕ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪ್ರಾರಂಭದಲ್ಲಿ ಶ್ರೀ ಕ್ಷೇತ್ರದ ಸರ್ವಶಕ್ತಿಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ,ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ

ಪಡುಬಿದ್ರಿ: ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ಪಲಿಮಾರಿನ ನಡಿಯೂರು ಕೊಪ್ಪಲ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ನಂದಿಕೂರು ಪಲಿಮಾರು ರಸ್ತೆಯಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವರಾಲು ಮಟ್ಟು ಕಡೆಯಿಂದ ಕುಂಜ್ಞಾಲಿ ತೋಟ ಸಣ್ಣ ಸೇತುವೆ ಬಳಿ ಕೆ.ಎಲ್. 60-ಎ.9937ನೋಂದಾನಿ ಸಂಖ್ಯೆಯ ಟಿಪ್ಪರೊಂದು ಪೊಲೀಸ್ ವಾಹನ ನೋಡಿ ಪಕ್ಕದ

ಮೂಡುಬಿದಿರೆ: ಚಿನ್ನ ಕದ್ದ ಆರೋಪಿಯ ಬಂಧನ

ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಕಚೇರಿ ಸಮೀಪದ ಮನೆಯಲ್ಲಿದ್ದ ಚಿನ್ನ ಮತ್ತು ಮೊಬೈಲನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಬಂಟ್ವಾಳ ರಾಯಿ ನಿವಾಸಿ ದೀಕ್ಷಿತ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಬಾಗಲಕೋಟೆ ಮೂಲದ ನಿವಾಸಿಗಳು ವಾಸವಿದ್ದ ಮನೆಗೆ ಹಾಡು ಹಗಲೇ ನುಗ್ಗಿದ ಆರೋಪಿ ಮನೆಯಲ್ಲಿದ್ದ ಚಿನ್ನದ ಸರ ಮೊಬೈಲ್ ಸೇರಿದಂತೆ ರೂ 50 ಸಾವಿರ ಮೌಲ್ಯದ ಸ್ವತ್ತು ಕಳವು ಮಾಡಿದ್ದ. ಈ ಬಗ್ಗೆ ಮೂಡುಬಿದಿರೆ

ಕೊಕ್ಕಡ:ಅನಾರು-ಪಟ್ರಮೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 2024ರ ಕ್ಯಾಲೆಂಡರ್ ಬಿಡುಗಡೆ

ಕೊಕ್ಕಡ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನಾರು -ಪಟ್ರಮೆ ಇದರ 2024 ವರ್ಷದ ಕ್ಯಾಲೆಂಡರ್ ನ್ನು ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ನಿತೇಶ್ ಬಲ್ಲಾಳ್ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಪವಿತ್ರಪಾಣಿ ಶ್ರೀಧರ ಶಬರಾಯ ಅಕ್ಕೋ, ಅರ್ಚಕರಾದ ಗುರುಪ್ರಸಾದ್ ನಿಡ್ವಣ್ಣಾಯ, ದೇವಪಾಲ ಅಜ್ರಿ ಉಳಿಯಬೀಡು, ಜಾತ್ರಾ ಸಮಿತಿ ಅಧ್ಯಕ್ಷ  ಹರೀಶ್ ಅಪ್ರೋಡಿ, ಯುವರಾಜ್ ಜೈನ್ ಉಳಿಯಬೀಡು, ಚಂದ್ರಶೇಖರ ಗೌಡ ಅನಾರು, ನಿರಂಜನ್ ಜೈನ್

ಮೂಡುಬಿದಿರೆ: ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ ಉದ್ಘಾಟನೆ

ಮೂಡುಬಿದಿರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಯ್ಕೆಯಾಗಿರುವ ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಗ್ರಾಮದಲ್ಲಿ ಕೂಸಿನ ಮನೆ  ಕೇಂದ್ರವು  ಉದ್ಘಾಟನೆಗೊಂಡಿತು.  ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ ಅವರು ಕೂಸಿನ ಮನೆಯನ್ನು  ಉದ್ಘಾಟಿಸಿ, ಗ್ರಾಮಸ್ಥರ ಪ್ರೋತ್ಸಾಹದಿಂದ ಹೆಚ್ಚಿನ ಮಕ್ಕಳ ನೋಂದವಣೆಯಾಗಿ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್

ಮೂಡುಬಿದಿರೆ: ಪಂಚಾಯತ್ ಸಿಬ್ಬಂದಿ ಚಂದ್ರಹಾಸ್‌ ಗೆ ನುಡಿನಮನ

ಮೂಡುಬಿದಿರೆ: ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿರುವ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸಿಬಂದಿ ದಿ.ಚಂದ್ರಹಾಸ್ ಅವರಿಗೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮೂಡುಬಿದಿರೆ ತಾಲೂಕು ಪಂಚಾಯತ್, ತಾ.ಪಂ.ವ್ಯಾಪ್ತಿಯ ಅಧಿಕಾರಿ ಮತ್ತು ನೌಕರರ ವತಿಯಿಂದ ಶನಿವಾರ ಸಮಾಜ ಮಂದಿರದಲ್ಲಿ ಶ್ರದ್ಧಾಂಜಲಿ ಅರ್ಪಿಸುವ ಸಭೆ ನಡೆಯಿತು.   ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲೋಕೇಶ್  ಸಭೆಯ ಅಧ್ಯಕ್ಷತೆ ವಹಿಸಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ

ಮೂಡುಬಿದಿರೆ: ಕರಾಟೆಯಲ್ಲಿ ವರ್ಲ್ಡ್ ರೆಕಾರ್ಡ್‌ಗೆ ಮೂಡುಬಿದಿರೆಯ ಮಹಮ್ಮದ್ ನದೀಂ ಭಾಜನ

ಮೂಡುಬಿದಿರೆ : 540 ಹಂಚುಗಳನ್ನು 1ನಿಮಿಷ 57 ಸೆಕೆಂಡುಗಳಲ್ಲಿ ಎರಡೂ ಕೈಗಳಿಂದ ಪುಡಿಗಟ್ಟುವ ಮೂಲಕ ಕರಾಟೆ ಪಟು ಮಹಮ್ಮದ್ ನದೀಂ ನೋಬಲ್ ವರ್ಲ್ಡ್ ರೆಕಾಡ್೯ಗೆ ಭಾಜನರಾದರು. ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಸ್ಪರ್ಧೆಗಳ ಫಲಿತಾಂಶಗಳನ್ನು ದಾಖಲೀಕರಿಸಿ ನೋಬಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಸ್ಥೆಯಾಗಿದೆ. ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಕರಾಟೆ ರಿಯೂ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ಕರಾಟೆ

ಉಳ್ಳಾಲ: ಕೇರಳಕ್ಕೆ ಗೋವಾ ಮದ್ಯ ಸಾಗಾಟ- ಆರೋಪಿ ಸೇರಿದಂತೆ ಮದ್ಯ, ವಾಹನ ವಶಕ್ಕೆ 

ಉಳ್ಳಾಲ : ಗೂಡ್ಸ್ ಟೆಂಪೋದಲ್ಲಿ ಗೋವಾ ಮದ್ಯದ ಪೆಟ್ಟಿಗೆಗಳನ್ನು  ಕೇರಳಕ್ಕೆ ಸಾಗಾಟ ನಡೆಸುತ್ತಿದ್ದ  ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು  ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆಯೂ ತೆಂಗಿನ ಗೆರಟೆಗಳನ್ನು ಮೇಲಿಟ್ಟು ಸಾರಾಯಿ ಸಾಗಾಟ ನಡೆಸಿ ಬಂಧಿತನಾಗಿದ್ದ ಆರೋಪಿ ಇದೀಗ ಮತ್ತದೇ ಮಾದರಿಯಲ್ಲಿ ಅಕ್ರಮ ಸಾಗಾಟ ನಡೆಸುವ ಮೂಲಕ ಕರ್ನಾಟಕ ಅಬಕಾರಿ ಪೊಲೀಸರಿಂದ ಬಂಧಿತನಾಗಿದ್ದಾನೆ.