Home Posts tagged #mangalore (Page 52)

ಬೆಳ್ತಂಗಡಿ: ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿದ ಶಾಸಕಿ ನಯನ ಮೋಟಮ್ಮ

ಬೆಳ್ತಂಗಡಿಯ ದಿಡುಪೆಯಿಂದ ಸಂಸೆ ರಸ್ತೆಯನ್ನು ಮಾಡಲು ಶೀಘ್ರದಲ್ಲಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು. ಅವರು, ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿ ಅವರು ಮಾತನಾಡಿದರು. ಕಲಸ ಹೊರನಾಡು ಈ ಪ್ರದೇಶದ ಜನರಿಗೆ ಹಾಸ್ಪಿಟಲ್, ವಿದ್ಯಾಭ್ಯಾಸ ಹಾಗೂ ವಿವಿಧ ಕ್ಷೇತ್ರಕ್ಕೆ ಸುಬ್ರಹ್ಮಣ್ಯ

ಮಂಗಳೂರು: ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿರುವುದಕ್ಕೆ ಖಂಡನೆ: ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿರವರ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬಸ್ಸುನ್ನು ಅಡ್ಡಗಟ್ಟಿ ದಾಳಿ ನಡೆಸಲು ಯತ್ನಸಿರುವುದನ್ನ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರಲ್ಲಿ ಪ್ರತಿಭಟನೆ ನಡೆಯಿತು. ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರು ಘೋಷಣೆ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾಜಿ

ಸುಳ್ಯ: ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್

ಸರಕಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಹೇಳಿದ್ದಾರೆ. ಅವರು ಸುಳ್ಯ ಕೆವಿಜಿ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಜನತಾ ದರ್ಶನ

ಉಡುಪಿ: ರಾಮನ ಹೆಸರಿನಲ್ಲಿ ಬಿಜೆಪಿ ರಾಜಕಾರಣ: ಸಚಿವ ಶಿವರಾಜ್ ತಂಗಡಗಿ

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ

ಬೆಳ್ತಂಗಡಿ: ಬಾಲರಾಮ ಪ್ರತಿಷ್ಠಾಪನೆ ಐತಿಹಾಸಿಕ ದಿನ-ಕನ್ಯಾಡಿ ಶ್ರೀ

ಜನವರಿ 22ರಂದು ನಮಗೆ ಐತಿಹಾಸಿಕ ದಿನ ಎಂದು ಕನ್ಯಾಡಿ ಶ್ರೀಗಳು ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ದೇವಸ್ಥಾನದಲ್ಲಿ ಮಾತನಾಡಿ, ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆ ನಡೆಯುತ್ತಿದೆ. ಇವತ್ತು ನಮ್ಮ ಕನಸು ನನಸಾಗಿದೆ. ಹಲವಾರು ಮಂದಿ ಕರಸೇವಕರ ಬಲಿದಾನದಿಂದ ಇವತ್ತು ಭವ್ಯರಾಮ ಮಂದಿರ ನಿರ್ಮಾಣವಾಗಿದೆ. ಇದಕ್ಕೆ ಹೋರಾಟ ಮಾಡಿದ ಎಲ್ಲರಿಗೂ ಶ್ರೀರಾಮ ದೇವರ ಆಶೀರ್ವಾದ ಇರಲಿ

ಬೆಳ್ತಂಗಡಿ : ಅಯೋಧ್ಯೆಯಲ್ಲಿ ಕರ ಸೇವಕರಾಗಿ ಪಟ್ರಮೆಯ ದೇವಪಾಲ ಅಜ್ರಿ

ಅಯೋಧ್ಯೆಯಲ್ಲಿ ಕರ ಸೇವಕರಾಗಿ ಕೆಲಸ ಮಾಡಿದ ಬೆಳ್ತಂಗಡಿ ತಾಲೂಕಿನ ಹಲವಾರು ಮಂದಿ ಇದ್ದಾರೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದೇವಪಾಲ ಅಜ್ರಿ ಎಂಬವರು ಕೂಡ ಒಬ್ಬರು. ಅವರು 1991-92ರಲ್ಲಿ ಅಯೋಧ್ಯೆಗೆ ಹೋಗಿದ್ದರು. ಅಲ್ಲಿ ಕಷ್ಟಪಟ್ಟು ದಿನಗಳನ್ನು ವಿವರಿಸಿದ ಅವರು, ನಮ್ಮ ಹೋರಾಟದ ಫಲ ಇವತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ ಇದು ಇಡೀ ಜಗತ್ತಿಗೇ ಸಂತೋಷದ ವಿಚಾರ ಎಂದು ಹೇಳಿದರು.

ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯ ನಗರ ಶ್ರೀರಾಮೋತ್ಸವ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರದಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆದ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ಪ್ರಾರ್ಥನೆ, ಭಜನೆ, ಶ್ರೀರಾಮ ರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ರಾಮಾಯಣ ಆಧಾರಿತ ರಸಪ್ರಶ್ನೆಗಳು, 108 ಬಾರಿ ರಾಮ ತಾರಕ ಮಂತ್ರ, ಶ್ರೀ ರಾಮೋತ್ಸವವು ನಡೆಯಿತು. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಜೊತೆಗೆ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಪ್ಪ ಕಟ್ಟೆಮಜಲು,

ಬಂಟ್ವಾಳ : ದರೋಡೆ ಪ್ರಕರಣವನ್ನು ಭೇಧಿಸಿದ ದ.ಕ.ಜಿಲ್ಲಾ ಪೊಲೀಸರು

ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ದಿನಾಂಕ; 11-01-2024 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ, ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡವು, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26),

ಉಳ್ಳಾಲ : ಶೇಂದಿ ತೆಗೆಯುವ ಸಂದರ್ಭ ತೆಂಗಿನಮರದಿಂದ ಬಿದ್ದು ಸಾವು

ಉಳ್ಳಾಲ : ಕೊಣಾಜೆ ಮುಯರ್ತೆದಾರರ ಸಂಘದ ಮಾಜಿ ನಿರ್ದೇಶಕರೋರ್ವರು ಶೇಂದಿ ತೆಗೆಯುವ ಸಂದರ್ಭ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿನ ಮನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ಕುಟುಂಬ ಸಮೇತರಾಗಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು. ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆ

ಮಾರ್ಚ್ 10ರಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಪೂರ್ವಭಾವಿ ಸಭೆಯು ಶಿರ್ತಾಡಿ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಅಶೋಕ್ ಪೂಜಾರಿಯವರ ನೇತೃತ್ವದಲ್ಲಿ ಜನವರಿ 19ರಂದು ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್ ,ಉಪಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಪ್ರಧಾನ ಕಾರ್ಯದರ್ಶಿ ಗಂಗಾಧರ್ ಚೇಲಾರ್,ಮೂಡಬಿದ್ರೆ ವಲಯದ ಸಂಚಾಲಕರಾದ ಕುಮಾರ್ ಪೂಜಾರಿ ಹಾಗೂ