Home Posts tagged #manjeshwara (Page 4)

ರಾಹುಲ್ ‘ದೋಷಿ’ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ – ಮೀಂಜ – ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ

ಮಂಜೇಶ್ವರ: ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದಕ್ಕೆಸಂತಸವನ್ನು ವ್ಯಕ್ತಪಡಿಸಿ ಮೀಂಜ ಮತ್ತು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ಸುಂಕದಕಟ್ಟೆಯಿಂದ ಹೊರಟ ಮೆರವಣಿಗೆ ಮಜೀರ್ ಪಳ್ಳದಲ್ಲಿ ಸಮಾಪ್ತಿಗೊಂಡಿತು.

ಮಕ್ಸೂದ್ ಕೈಚಳಕದಿಂದ ಮೂಡಿಬಂದ ವಿವಿಧ ಕಲಾಕೃತಿ

ಮಂಜೇಶ್ವರ : ಮಕ್ಕಳ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಹಾಗೂ ಪೋಷಣೆ ಸಿಕ್ಕರೆ ಮಕ್ಕಳು ನ್ನಷ್ಟು ಉನ್ನತ ಮಟ್ಟಕ್ಕೆ ಏರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಬಿ.ಎಸ್ ನಗರದ ಭಿನ್ನ ಚೇತನರಾಗಿರುವ ಕೆ.ನಾಸರ್ ಹಾಗೂ ಜುಬೈದ ದಂಪತಿಗಳ ಪುತ್ರ ಅಬೂಬಕ್ಕರ್ ಮಕ್ಸೂದ್. ಉದ್ಯಾವರ ಅಲ್ ಸಖಾಫ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ತನ್ನ ಕೈ ಚಳಕದಿಂದ ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿತ್ರಕಲೆಯಲ್ಲಿ ಅದ್ಭುತ ಸಾಧನೆಯನ್ನು ಮಾಡಿದ್ದಾನೆ. ಇಷ್ಟು

ಮಂಜೇಶ್ವರ: ಬೇಕೂರು ಶಾಲೆಯ ವಿದ್ಯಾರ್ಥಿ ಮೇಲೆ ಹಲ್ಲೆ

ಮಂಜೇಶ್ವರ : ರ್‍ಯಾಗಿಂಗ್ ಎನ್ನುವುದು ಮಾನವ ಹಕ್ಕುಗಳ ದುರುಪಯೋಗದ ವ್ಯವಸ್ಥಿತ ರೂಪವಾಗಿದೆ. ವಿಪರೀತ ಕಿರುಕುಳ ನೀಡುವುದರ ಜೊತೆಗೆ ಮನಸ್ಸಿನಲ್ಲಿ ಭಯವನ್ನು ಸೃಷ್ಟಿ ಮಾಡುತ್ತಿರುವ ರ್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುತ್ತಿರುವ ಮಧ್ಯೆಯೇ ಬೇಕೂರು ಕುಂಬಳೆ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಯನ್ನು ಬಸ್ಸು ನಿಲ್ದಾಣದಲ್ಲಿ ಹಿಗ್ಗಾ ಮಗ್ಗಾ ಥಳಿಸಿ ಹಲ್ಲೆ ಗೈದು ಗಾಯಗೊಳಿಸಲಾಗಿದೆ. ಪೆರ್ಮುದೆ

ಮಂಜೇಶ್ವರದಲ್ಲಿ ತಿಮಿಂಗಲದ ಅಸ್ತಿಪಂಜರ ಪತ್ತೆ

ಮಂಜೇಶ್ವರದಲ್ಲಿ 16 ವರ್ಷ ಹಳೆಯದಾಗಿರುವ ತಿಮಿಂಗಿಲ ಮೀನಿನ ಅಸ್ತಿಪಂಜರವನ್ನು ಕಾಸರಗೋಡು ಡಿ ಎಫ್ ಒ ಪತ್ತೆ ಹಚ್ಚಿದೆ. ಕುಂಜತ್ತೂರು ಸಮೀಪದ ಕಣ್ಣತೀರ್ಥ ಕಡಪ್ಪುರದಲ್ಲಿ ಕರ್ನಾಟಕ ನಿವಾಸಿಯ ಮಾಲಕತ್ವದಲ್ಲಿರುವ ಸುಮಾರು ಹದಿನೈದು ಎಕ್ರೆಯ ಸ್ಥಳದಲ್ಲಿರುವ ಶೆಡ್ಡೊಂದರಲ್ಲಿ ತಿಮಿಂಗಿಲದ ಅಸ್ತಿಪಂಜರ ಪತ್ತೆಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಮಾಲಿಕರನ್ನು ಸಂಪರ್ಕಿಸಿದಾಗ 2007 ರಲ್ಲಿ ಕಣ್ಣತೀರ್ಥ ಕಡಪ್ಪುರದಲ್ಲಿ ತೀರಕ್ಕೆ ಬಂದ ಸತ್ತ

ಉಪ್ಪಳ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯಿಂದ ಆಹಾರ ಸಾಮಾಗ್ರಿ ವಿತರಣೆ

ಮಂಜೇಶ್ವರ : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 57ನೇ ಸೇವಾ ಕಾರ್ಯದ ವತಿಯಿಂದ ಉಪ್ಪಳ ಸಮೀಪದ ಪೈವಳಿಕೆ ಲಾಲ್ಬಾಗ್ ಬೋಳಂಗಳ ನಿವಾಸಿ ಕಲ್ಯಾಣಿ ಕೃಷ್ಣ ದಂಪತಿಗಳ ಕುಟುಂಬಕ್ಕೆ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಲ್ಯಾಣಿ ಕೃಷ್ಣ ದಂಪತಿಗಳ ಮನೆಯು ಶೋಚನಿಯಾವಸ್ಥೆಯಲ್ಲಿದ್ದು, ಅಲ್ಲದೇ ಮುಪ್ಪಿನ ಕಾಲದಲ್ಲಿ ದುಡಿದು ಸಾಕಾಬೇಕಾದ ಮಕ್ಕಳ ಅನಾರೋಗ್ಯ ಇನ್ನೊಂದು ಕಡೆ. ಈ ಪರಿಸ್ಥಿತಿಯಲ್ಲಿ ಕಲ್ಯಾಣಿಯವರಿಗೆ ದಿಕ್ಕು ತೋಚದ ಪರಿಸ್ಥಿತಿ ಮೂರು

ಮಂಜೇಶ್ವರ : ಸ್ಟಾರ್ಸ್ ಯೋಜನೆಯ ಭಾಗವಾಗಿ ಕಥೋತ್ಸವ 2023

ಬಹುಭಾಷಾ ಸಂಗಮ ಭೂಮಿಯಾದ ಮಂಜೇಶ್ವರ ದ ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ ಮಂಜೇಶ್ವರ ದಲ್ಲಿ ಸಮಗ್ರ ಶಿಕ್ಷಾ ಕಾಸರಗೋಡು ಬಿ ಅರ್ ಸಿ ಮಂಜೇಶ್ವರದ ಸಹಭಾಗಿತ್ವದಲ್ಲಿ ಸ್ಟಾರ್ಸ್ ಯೋಜನೆಯ ಭಾಗವಾಗಿ ಕಥೋತ್ಸವ 2023 ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಯವರು ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ ರವರು ಇಂದಿನ ಕಾಲಘಟ್ಟದಲ್ಲಿ ಕಥೆಯ ಅಗತ್ಯದ ಬಗ್ಗೆ

ಮಂಜೇಶ್ವರದಲ್ಲಿ ಉದ್ಯೋಗ ಮೇಳ-2023

ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಭಾರತ ಉದ್ಯೋಗ ಕೇಂದ್ರ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನ ಸಹಯೋಗದಲ್ಲಿ ಉದ್ಯೋಗ ಮೇಳ-2023 ನಡೆಯಿತು. ಕೇರಳದ ವಿದ್ಯಾವಂತ ಯುವಕ/ಯುವತಿಯರಿಗೆ ಸೌಕರ್ಯ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ರಾಷ್ಟ್ರೀಯ ಉದ್ಯೋಗ ಸೇವಾ ಇಲಾಖೆಯ ಮೂಲಕ ಉಚಿತ ಉದ್ಯೋಗ ವಲಯಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯ ಅಂಗವಾಗಿ 50 ಕ್ಕೂ ಹೆಚ್ಚು ಅಧಿಕಾರಿಗಳು

ಮಂಜೇಶ್ವರ : ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹ

ಮಂಜೇಶ್ವರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ಮೂಲನೆಗೆ ಹಸಿರು ಕರ್ಮ ಸೇನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಶುಲ್ಕವನ್ನು ಪಡೆದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೊಂಡೊಯ್ಯುತ್ತಿರುವುದು ಸ್ಥಳೀಯರಲ್ಲಿ ಅಲ್ಪವಾದರೂ ಸಮಾಧಾನವನ್ನು ಹುಟ್ಟಿಸಿದೆ. ಕೆಲವೊಂದು ಕುಟುಂಬಗಳು ಈಗಲೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಹಾಕುತ್ತಿರುವುದು ಮುಂದುವರಿದಿದೆ. ಇಂತಹ ತ್ಯಾಜ್ಯಗಳನ್ನು ಹುಡುಕಿಕೊಂಡು ಬರುತ್ತಿರುವ ಬೀದಿ ನಾಯಿಗಳು

ಮಂಜೇಶ್ವರ : ತೋಟದ ಕೆಲಸಕ್ಕಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು || A MAN WHO WAS WORKING IN THE GARDEN COLLAPSED AND DIED

ಮಂಜೇಶ್ವರದ ವರ್ಕಾಡಿ ಕುಂಡಡ್ಕ ಎಂಬಲ್ಲಿ ರಬ್ಬರ್ ತೋಟದಲ್ಲಿ ಕೆಲಸಕ್ಕಿದ್ದ ತನಿಯ ಎಂಬ ವ್ಯಕ್ತಿ ದಿಢೀರ್ ಅಸೌಖ್ಯಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಜೀರ್ ಪಳ್ಳ ಟೌನ್ ಸೋಶಿಯಲ್ ವರ್ಕ್ ತಂಡದ ಅಧ್ಯಕ್ಷ ಮುಸ್ತಫಾ ಕಡಂಬಾರ್ ರವರ ನೇತೃತ್ವದ ಕಾರ್ಯಕರ್ತರು ವರ್ಕಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಳಿಕ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ ಕಾರ್ಯಕರ್ತರು ಕಾಞಂಗಾಡಿನಲ್ಲಿರುವ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ

ಹೊಸಂಗಡಿ-ವರ್ಕಾಡಿ-ಆನೆಕಲ್ಲು ರಸ್ತೆ ಬದಿ ಅಪಾಯಕಾರಿ ಮರಗಳು

ಮಂಜೇಶ್ವರ: ಹೊಸಂಗಡಿ – ವರ್ಕಾಡಿ – ಆನೆಕಲ್ಲು ರಸ್ತೆಯ ವಿವಿಧ ಕಡೆ ರಸ್ತೆ ಬದಿ ಬೃಹತ್ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ಇನ್ನು ಕೆಲವು ಕೊಂಬೆಗಳು ಮುರಿದು ಬೀಳುವ ಹಂತದಲ್ಲಿವೆ. ಮಳೆಗಾಲ ಆರಂಭಗೊಂಡ ಬಳಿಕ ಈಗಾಗಲೇ ಹಲವಾರು ಅನಾಹುತಗಳು ಸಂಭವಿದೆ. ಇಲಾಖೆ ಈ ಬಗ್ಗೆ ಎಚ್ಚರ ವಹಿಸದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಮಂಜೇಶ್ವರದ ಬಹುತೇಕ ಪ್ರದೇಶಗಳಲ್ಲೂ ಒಣಗಿದ, ರೋಗಗ್ರಸ್ತ ಮತ್ತು ಬೃಹತ್ ಮರಗಳು, ರೆಂಬೆಗಳನ್ನು ಮಳೆಗಾಲಕ್ಕೆ