ರಾಹುಲ್ ‘ದೋಷಿ’ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ – ಮೀಂಜ – ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ
ಮಂಜೇಶ್ವರ: ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದಕ್ಕೆ
ಸಂತಸವನ್ನು ವ್ಯಕ್ತಪಡಿಸಿ ಮೀಂಜ ಮತ್ತು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಸುಂಕದಕಟ್ಟೆಯಿಂದ ಹೊರಟ ಮೆರವಣಿಗೆ ಮಜೀರ್ ಪಳ್ಳದಲ್ಲಿ ಸಮಾಪ್ತಿಗೊಂಡಿತು.
ಸಂಭ್ರಮಾಚರಣೆಯಲ್ಲಿ ಮೀಂಜ ಮಂಡಲಾಧ್ಯಕ್ಷ ಶ್ರೀ ಇಕ್ಬಾಲ್ ಕಳಿಯೂರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಪಿ. ಸೋಮಪ್ಪ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿಎಂಕೆ ಮೊಹಮ್ಮದ್, ನೇತಾರರಾದ ಮೊಹಮ್ಮದ್ ಪಾವೂರು, ಮಜೀದ್ ಪಿ ಬಿ, ಉಮರಬ್ಬ ಆನೆಕಲ್ಲು, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು ..