Home Posts tagged #mudabidre (Page 7)

ಮೂಡಬಿದ್ರೆ : ತುಳುನಾಡ ಕೊಡಿ ಧ್ವಜಸ್ಥಂಭ ಲೋಕಾರ್ಪಣೆ

ನೇತಾಜಿ ಬ್ರಿಗೇಡ್ ಮೂಡುಬಿದಿರೆ ಇದರ ಮೂರನೇ ವರ್ಷದ ದೀಪಾವಳಿ ಉತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದ ಬಳಿ ಇರುವ ಚಿಣ್ಣರ ಉದ್ಯಾನವನದಲ್ಲಿ ಮೊದಲ ಬಾರಿ “ತುಳುನಾಡ ಕೊಡಿ ಧ್ವಜಸ್ಥಂಭವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಸೋಮವಾರ ಲೋಕಾರ್ಪಣಿಗೊಳಿಸಿದರು. ತುಳು ಭಾಷೆಯನ್ನು ಸಂವಿಧಾನದ ಆರ್ಟಿಕಲ್ 347 ಪ್ರಕಾರ ಅಧಿಕೃತ ಮಾಡುವ ಬಗ್ಗೆ ಮತ್ತು ತುಳು ಭಾಷೆಯನ್ನು

ಮೂಡುಬಿದಿರೆ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ: ಇಲ್ಲಿನ ಪೇಪರ್ ಮಿಲ್ಲ್ ಬಳಿಯ ನಿವಾಸಿ ಜಾನ್ ಫೆರ್ನಾಂಡಿಸ್ (57ವ) ಎಂಬವರು ತನ್ನ ಮನೆಯಲ್ಲಿ ಮಂಗಳವಾರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜಾನ್ ಅವರು ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ನಂತರ ಊರಿಗೆ ಬಂದ ನಂತರ ಪಾಶ್ವ ವಾಯುಗೆ ಸಿಲುಕಿ ಚಿಕಿತ್ಸೆ ಪಡೆದುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಚೇತರಿಸಿಕೊಂಡಿದ್ದ ಅವರು ಮನೆಯ ಬಳಿಯಲ್ಲೇ ಫಾಸ್ಟ್ ಫುಡ್ ಅಂಗಡಿ ನಡೆಸುವುದಾಗಿ ಹೇಳಿಕೊಂಡಿದ್ದರು. ಆದರೆ ಮಂಗಳವಾರ

ಮೂಡಬಿದರೆ : ನೇತಾಜಿ ಬ್ರಿಗೇಡ್ ನಿಂದ ದೀಪಾವಳಿ ಉತ್ಸವ

ಆ್ಯಂಕರ್ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ದೀಪದಿಂದ ದೀಪ ಹಚ್ಚುವ ಮೂಲಕ ಊರಿನ ಸಮಸ್ತ ನಾಗರಿಕರ ಜೊತೆಗೂಡಿ 3ನೇ ವರ್ಷz ಬೆಳಕಿನ ಹಬ್ಬವನ್ನು ಸ್ವರಾಜ್ಯ ಮೈದಾನದ ಚಿಣ್ಣರ ಉದ್ಯಾನವನದಲಿ ಸಂಭ್ರಮಿಸಲಾಯಿತು. ಉತ್ಸವವನ್ನು ವಾರ್ಡ್ ಸದಸ್ಯ ರಾಜೇಶ್ ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇವೇಳೆ ಸತ್ಯಶ್ರೀ ಭಜನಾ ಮಂಡಳಿ ಪಳಕಳ ಪುತ್ತಿಗೆ ಇವರ ವತಿಯಿಂದ ಕುಣಿತ ಭಜನೆ ನಡೆಯಿತು. ಸಿಹಿ

ಮೂಡುಬಿದರೆ: ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಪಿತೃ ವಿಯೋಗ

ಮೂಡುಬಿದಿರೆ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರ ತಂದೆ ರಮೇಶ್ ಶಾಂತಿ ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರು ಪೂಜೆಯ ಅರ್ಚಕರಾಗಿಯೂ, ಮೂಡುಬಿದಿರೆ ಅಯ್ಯಪ್ಪ ದೇವಸ್ಥಾನ ಸ್ಥಾಪಕರಾಗಿಯೂ ಸೇವೆ ಸಲ್ಲಿಸಿದವರು. ಅಯ್ಯಪ್ಪ ಗುರುಸ್ವಾಮಿಯಾಗಿ

ಮೂಡುಬಿದರೆ :ಸ್ವಾಭಿಮಾನದ ಬದುಕಿಗಾಗಿ ಸರಕಾರ ಬದ್ಧ: ಶಾಸಕ ಕೋಟ್ಯಾನ್

ಮೂಡುಬಿದಿರೆ: ಅನ್ನ, ಬಟ್ಟೆ, ಉಳಿಯಲೊಂದು ಸೂರು ಇದು ಪ್ರತಿಯೊಬ್ಬರ ಅಪೇಕ್ಷೆ ಈ ಕನಿಷ್ಠ ವ್ಯವಸ್ಥೆ ಈಡೇರಿಸುವ ಬದ್ಧತೆಯಿಂದ ಇಂದು ರಾಜ್ಯ ಹಾಗೂ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಅವರು ಮೂಡುಬಿದಿರೆ ಕನ್ನಡ ಭವನದಲ್ಲಿ ಸ್ವ ನಿಧಿ ಪರಿಚಯ ಬೋರ್ಡ್ ಹಾಗೂ ಪ್ರಧಾನ ಮಂತ್ರಿಯವರ ಶುಭಾಷಯ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಕೇಂದ್ರ ವಸತಿ ಮತ್ತು

ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆ-ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆಯಡಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಮುಂಡೇಲು, ಮಂಜೊಲು ಗುಡ್ಡೆ ಹಾಗೂ ಪೆಲತ್ತಡ್ಕ ಬಳಿ 94 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಗುದ್ದಲಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಕೋಟ್ಯಾನ್ ಈ ಭಾಗದ ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಸರಕಾರದ ಕನಸಿನ ಯೋಜನೆಯಾಗಿದೆ. ಅಲ್ಲದೆ ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು 3

ಮೆಸ್ಕಾಂ ಕಚೇರಿಯ ಎದುರು ರಾತ್ರೋ ರಾತ್ರಿ ಧರಣಿ

ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ಕೋಂಕೆ ಎಂಬಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಟ್ಟು 4 ದಿನಗಳಾಗಿದ್ದು ಸ್ಥಳಿಯ ನಿವಾಸಿಗಳು ಕುಡಿಯಲೂ ನೀರಿಲ್ಲದೆ ತೊಂದರೆ ಅನುಭವಿಸಿದ್ದಾರೆ. ಈ ಭಾಗದಲ್ಲಿ ಬಹಳಷ್ಟು ಕೃಷಿಕರೂ ಇದ್ದು ಕೃಷಿಗೆ ನೀರು ಬಿಡಲೂ ಸಾಧ್ಯವಾಗದೆ ತೊಂದರೆ ಅನುಭವಿಸಿದರೂ ಮೆಸ್ಕಾಂ ಇಲಾಖೆಯ ಎ.ಇ.ಇ., ಎಸ್ .ಒ. ಸಹಿತ ಸಿಬ್ಬಂದಿಗಳು ವಿಷಯ ತಿಳಿದರೂ ಸಹಕರಿಸದೆ ಬಹಳಷ್ಟು ತೊಂದರೆ ನೀಡಿದ್ದಾರೆ. ಕೊನೆಕೊನೆಗೆ