Home Posts tagged #mudabidre (Page 5)

ಮೂಡುಬಿದರೆ: ಕೋಟಿ-ಚೆನ್ನಯ” ಜೋಡುಕರೆ ಕಂಬಳಕ್ಕೆ ಚಾಲನೆ, ಶೂನ್ಯ ತ್ಯಾಜ್ಯದತ್ತ ಗಮನವಿರಿಸಿ ನಡೆಯುತ್ತಿರುವ ಕಂಬಳ

ಮೂಡುಬಿದಿರೆ: ಹಲವು ವಿಶೇಷಗಳಿಗೆ ಮುನ್ನುಡಿ ಬರೆಯಲಿರುವ, ಶೂನ್ಯತ್ಯಾಜ್ಯದತ್ತ ಗಮನವಿರಿಸಿಕೊಂಡು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ 20ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ” ಕೋಟಿ-ಚೆನ್ನಯ” ಜೋಡುಕರೆ ಕಂಬಳವು ಶನಿವಾರ

ತೋಡಾರು ದೈವಸ್ಥಾನಕ್ಕೆ ಅಪೂರ್ವ ಕೆತ್ತನೆಯ ಪುಷ್ಪ ದಂಡಿಗೆ ಸಮರ್ಪಣೆ

ಮೂಡುಬಿದಿರೆ : ದೈವಗಳಿಗೆ ಹಾಕಿದ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡಲು ಅಪೂರ್ವ ಕೆತ್ತನೆಯ ” ಪುಷ್ಪ ದಂಡಿಗೆ ” ಯನ್ನು ತೋಡಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಕಾರಮೊಗರು ಗುತ್ತು ಪ್ರೇಮನಾಥ ಮಾರ್ಲರು ಶುಕ್ರವಾರ ಸೇವಾರೂಪವಾಗಿ ಸಮರ್ಪಿಸಿದರು. ಮೂಡುಬಿದಿರೆ ದೇವಕೀ ಲಕ್ಷ್ಮಿ ಮಿಲ್ ನ ಮಾಲಕರಾಗಿರುವ ಪ್ರೇಮನಾಥ ಮಾರ್ಲ ಅವರು ತಮ್ಮದೇ ಮಿಲ್ ನಲ್ಲಿ ನಿರ್ಮಿಸಿರುವ ಈ ಪುಷ್ಪ ದಂಡಿಗೆಯು

ಜಾಂಬೂರಿಯಲ್ಲಿ ಸೌತ್ ಕೊರಿಯಾವನ್ನು ಪ್ರತಿನಿಧಿಸಿದ ತಾಯಿ ಮಗ

ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಸ್ಕೌಟ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಸೌತ್ ಕೊರಿಯಾದಿಂದ ತಾಯಿ ಮಗ ಪ್ರತಿನಿಧಿಸಿದ್ದಾರೆ.ಒಟ್ಟು 7 ಜನ ಪ್ರತಿನಿಧಿಗಳು 2 ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿರುವುದಾಗಿ ತಿಳಿಸಿದ ಚಾ ಸಾಂಗೋಕ್, ಇಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಹಿತವನ್ನು ನೀಡಿದೆ. ಊಟೋಪಚಾರದ

ಮೂಡುಬಿದರೆ: ಅಂತರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಕಾರ್ಕಳದ ದಾಮೋದರ ಆಚಾರ್ಯ ಕುಟುಂಬದ ಕಮ್ಮಾರಿಕೆ

ಅದೊಂದು ಕಮ್ಮಾರಿಕೆಯ ಸ್ಟಾಲ್. ಅದರೊಳಗಡೆ ಮಲಗಿಕೊಂಡಿರುವ ಎರಡು ನಾಯಿಗಳು, ಇನ್ನೊಂದು ಕಡೆಯಲ್ಲಿ ಹುಡುಗಿಯೊಬ್ಬಳು ಕತ್ತಿಗಾಗಿ ಮರದ ಕೈಯನ್ನು ತಯಾರಿಸುತ್ತಿರುವುದು, ಇನ್ನೊಂದು ಕಡೆಯಲ್ಲಿ ಮಹಿಳೆಯೊಬ್ಬರು ಕಮ್ಮಾರಿಕೆಗೆ ಬೇಕಾದ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುವುದು ಮತ್ತೊಂದು ಕಡೆಯಲ್ಲಿ ಗಂಡಸು ಮತ್ತು ಮಗ ಸೇರಿಕೊಂಡು ಕತ್ತಿಯನ್ನು ರೆಡಿ ಮಾಡುತ್ತಿರುವ ದೃಶ್ಯವೊಂದು ಎಲ್ಲರ ಗಮನ ಸೆಳೆಯುತ್ತಿರುವುದು ಜಾಂಬೂರಿಯಲ್ಲಿ. ಹೀಗೆ ಕಮ್ಮಾರಿಕೆಯಲ್ಲಿ

ಮೂಡುಬಿದರೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ದಾರಿದೀಪ : ಶಾಸಕ ಉಮಾನಾಥ ಎ ಕೋಟ್ಯಾನ್ ಅವರಿಂದ ಲೋಕಾರ್ಪಣೆ

ಮೂಡುಬಿದಿರೆ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮಂಜೂರಾದ ರೂ.33.50 ಲಕ್ಷ ಅನುದಾನದಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ದಾರಿದೀಪಗಳನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ದಿವ್ಯಾ ಜಗದೀಶ್, ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ

ಆಳ್ವಾಸ್ ಜಾಂಬೂರಿಯಲ್ಲಿ ಬಣ್ಣದ ಬಣ್ಣದ ಹೂ-ಗಿಡಗಳ ಲೋಕ ಸೃಷ್ಟಿ

ವಿದ್ಯಾಗಿರಿಯ ಆಳ್ವಾಸ್ ನ ಕ್ಯಾಂಪಸ್ ನ ಆವರಣದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಆರಂಭಗೊಳ್ಳಲು ಇನ್ನು ಒಂದು ದಿನವಷ್ಟೇ ಬಾಕಿಯಿದೆ. ಆದರೆ ವಿವಿಧ ಜಾತಿಯ ಬಣ್ಣ ಬಣ್ಣದ ಹೂ-ಗಿಡಗಳಿಂದ ತುಂಬಿದ ಲೋಕವೊಂದು ಈಗಾಗಲೇ ಸೃಷ್ಟಿಯಾಗುವ ಮೂಲಕ ಕಣ್ಮನ ಸೆಳೆಯುತ್ತಿದೆ. ವಿವಿಧ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳು ತರಬೇತುದಾರರಿದ್ದಾರೆ. ಪ್ರದರ್ಶನಗೊಳ್ಳುವ ಕಲಾ ವೈಭವಗಳೂ ಅಷ್ಟೇ… ಅದೂ ಅಂತಾರಾಷ್ಟ್ರೀಯಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಇಲ್ಲಿರುವ

ಜಾಂಬೂರಿಗಾಗಿ ಮುಸ್ಲಿಂ ಸೌಹಾರ್ದ ಸಮಿತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆ

ಮೂಡುಬಿದಿರೆ: ವಲಯ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆಯನ್ನು ದಫ್ ಕುಣಿತದ ಮೂಲಕ ಹೊರೆಕಾಣಿಕೆಯೊಂದಿಗೆ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ, ಜೈನುದ್ದೀನ್ ಸೇರಿದಂತೆ 1000 ಮಂದಿ ಭಾಗಿಯಾಗಿದ್ದಾರೆ.

ಅಂತಾರಾಷ್ಟೀಯ ಜಾಂಬೂರಿಯಲ್ಲಿ ಮೂಡಿ ಬರಲಿದೆ ಆಕರ್ಷಕ ಕಾನನ

ಮೂಡುಬಿದಿರೆ: ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ವಿದ್ಯಾಗಿರಿಯು ವಿವಿಧ ರೂಪದಲ್ಲಿ ಸಜ್ಜಾಗೊಳ್ಳುತ್ತಿದ್ದು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಮಹತ್ವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ.ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದಲ್ಲಿ ಕಳೆದ ಮೂರು ವಾರಗಳಿಂದ 50ರಿಂದ 60 ಮಂದಿ ಕಾರ್ಮಿಕರು ಕೆಲಸ ಮಾಡುವ ಮೂಲಕ 10

ಆಳ್ವಾಸ್ ಜಾಂಬೂರಿಗೆ 50 ಅಡಿ ಗಾತ್ರದ ಬೃಹತ್ ಗಾಳಿಪಟ

ಆಳ್ವಾಸ್ ಜಾಂಬೂರಿಗೆ 50 ಅಡಿ ಗಾತ್ರದ ಬ್ರಹತ್ ಗಾಳಿಪಟ ನಿರ್ಮಾಣವು ಡಿಸೆಂಬರ್ 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3ರ ತನಕ ಮಂಗಳೂರಿನ ಗೋಕುಲ್ ಸಭಾಂಗಣದಲ್ಲಿ ನೆರವೇರಲಿದೆ. 50 ಅಡಿ ಎತ್ತರದ 16 ಅಡಿ ಅಗಲದ ಈ ಗಾಳಿಪಟದಲ್ಲಿ ತುಳುನಾಡಿನ ಸಾಂಸ್ಕೃತಿಕ ವಿಚಾರಗಳ ಕಲಾಕೃತಿಗಳನ್ನು ಬಣ್ಣ ಗಳ ಮೂಲಕ ಅಭಿವ್ಯಕ್ತ ಪಡಿಸಲಾಗುವುದು. ಅಂತರಾಷ್ಟ್ರೀಯ ಖ್ಯಾತಿಯ ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಕಲಾವಿದರು ಮತ್ತು ಗಾಳಿಪಟ ವಿನ್ಯಾಸಕಾರರಾದ ದಿನೇಶ್ ಹೊಳ್ಳ ಮತ್ತು

ಮೂಡುಬಿದಿರೆ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂಡುಬಿದಿರೆ: ಎರಡು ವಾರದ ಹಿಂದೆ ಬೆಳ್ತಂಗಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರಿನ ಗುಡ್ಡ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಬರಮೇಲು ಮನೆಯ ಆನಂದ ಮೂಲ್ಯ (57) ಎಂಬವರ ಮೃತದೇಹ ಎಂದು ಗುರುತಿಸಲಾಗಿದೆ. ಆನಂದ ಮೂಲ್ಯ ಅವರು ಕುಕ್ಕೇಡಿ ಗ್ರಾಮ ಪಂಚಾಯತ್ ಬಳಿಯಲ್ಲಿರುವ ಹೊಟೇಲೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದರು. ಡಿ.3ರಂದು ಬೆಳಿಗ್ಗೆ